ಮಂಡ್ಯ: ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆ. 21ಕ್ಕೆ ಮುಂದೂಡಿರುವ ಹಿನ್ನಲೆಯಲ್ಲಿ ಇಂದು ಪ್ರತಿಕ್ರಿಯಿಸಿರುವ ಸಚಿವ ಎನ್. ಚಲುವರಾಯಸ್ವಾಮಿ, ತಮಿಳುನಾಡಿಗೆ ಇನ್ನು ಮುಂದೆ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನಾಗಮಂಗಲದಲ್ಲಿ ಮಾತನಾಡಿದ ಸಚಿವರು, ಆಣೆಕಟ್ಟೆಯಲ್ಲಿ ನೀರಿಲ್ಲ. ನಮಗೆ ಕುಡಿಯೋ ನೀರಿಗೆ ತೊಂದರೆ ಆಗುತ್ತದೆ. ಮೊದಲೇ ಬೆಳೆಗಳಿಗೆ ನೀರಿಲ್ಲ. ಮುಂದಿನ ದಿನಗಳಲ್ಲಿ ಕುಡಿಯೋ ನೀರಿಗೂ ತೊಂದರೆಯಾಗುತ್ತದೆ ಎಂದು ಹೇಳಿದರು.
ಪ್ರಾಧಿಕಾರಕ್ಕೆ ನಾವು ಪರಿಸ್ಥಿತಿ ತಿಳಿಸುತ್ತೇವೆ. ಸಿಎಂ, ಡಿಸಿಎಂ, ನೀರಾವರಿ ಸಚಿವರ ಜೊತೆ ಇಂದೇ ಮಾತನಾಡುತ್ತೇನೆ. ಸುಪ್ರೀಂ ಕೋರ್ಟ್ ತೀರ್ಪು ಒಳ್ಳೇದಾಗುತ್ತೆ ಅಂತಿದ್ವಿ. ಈಗ ಮುಂದೂಡಿರೋದ್ರಿಂದ ಅಲ್ಲಿವರೆಗೆ ನೀರು ಕೊಡಲು ಸಾಧ್ಯವಿಲ್ಲ. ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.