ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದ್ದು, ದಲಿತ ಸಂಘರ್ಷ ಸಮಿತಿ ವತಿಯಿಂದ ಕೇಂದ್ರ-ರಾಜ್ಯ ಸರ್ಕಾರದ ಅಣಕು ಶವಯಾತ್ರೆ ನಡೆಸಿ ವಿನೂತನವಾಗಿ ಪ್ರತಿಭಟನೆ ನಡೆಸಲಾಗಿದೆ,
ಮಂಡ್ಯದ ಸಂಜಯ ವೃತ್ತದಲ್ಲಿ ಅಣುಕು ಶವಯಾತ್ರೆ ನಡೆಸಲಾಗಿದ್ದು, ರಾಜ್ಯ ಹಾಗೂ ಕೇಂದ್ರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಕಷ್ಟ ಸೂತ್ರ ಜಾರಿಯಾಗಬೇಕು. ಸಂವಿಧಾನದ ಪ್ರಕಾರ ಜಲ ನೀತಿ ರೂಪಿಸಬೇಕು. ತತಕ್ಷಣ ತಮಿಳುನಾಡಿಗೆ ಬಿಡ್ತಿರುವ ನೀರು ನಿಲ್ಲಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಡಿಸಿ ಕಚೇರಿ ಆವರಣಕ್ಕೆ ಸರ್ಕಾರದ ಶವ ಕೊಂಡೊಯ್ಯಲು ಪೊಲೀಸರು ತಡೆ ನೀಡಿದ್ದು, ಸರ್ಕಾರದ ಅಣುಕು ಶವವನ್ನು ಕಿತ್ತು ಬಿಸಾಡಿದ್ದು, ಪೊಲೀಸರ ದೌರ್ಜನ್ಯದ ವಿರುದ್ಧ ದಲಿತ ಸಂಘರ್ಷ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಡಿಸಿ ಕಚೇರಿ ಹೊರಾವರಣದಲ್ಲಿ ಪೊಲೀಸರು ಕಿತ್ತು ಬಿಸಾಡಿ, ಅಳಿದುಳಿದ ವಸ್ತುಗಳನ್ನೇ ಸುಟ್ಟಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
