Monday, April 21, 2025
Google search engine

Homeಸಿನಿಮಾಪರಿಮಳ ಡಿಸೋಜಾ ಸಿನಿಮಾ ಸೆ.15ರಂದು ತೆರೆಗೆ

ಪರಿಮಳ ಡಿಸೋಜಾ ಸಿನಿಮಾ ಸೆ.15ರಂದು ತೆರೆಗೆ

ಕನ್ನಡ ಚಿತ್ರರಂಗದಲ್ಲಿ ಒಂದಾದ ಬಳಿಕ ಒಂದರಂತೆ ಸಿನಿಮಾಗಳು ಮೂಡಿ ಬರುತ್ತಿದೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರುವ ಸಿನಿಮಾ ‘ಪರಿಮಳ ಡಿಸೋಜಾ’. ನಟಿ ಭವ್ಯ ಮುಖ್ಯಭೂಮಿಕೆಯಲ್ಲಿರುವ ‘ಪರಿಮಳ ಡಿಸೋಜಾ’ ಚಿತ್ರ ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಹಾಗಾಗಿ ಪ್ರೇಕ್ಷಕರಲ್ಲಿ ಸಿನಿಮಾ ಕುರಿತು ಕುತೂಹಲ ಮೂಡಿದೆ.

U/A ಪ್ರಮಾಣ ಪತ್ರ: ಡಾ. ಗಿರಿಧರ್ ಹೆಚ್ ಟಿ ಆಕ್ಷನ್ ಕಟ್ ಹೇಳಿರುವ ಬಹು ತಾರಾಗಣದ ಈ ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿದೆ. ಬಹುನಿರೀಕ್ಷಿತ ‘ಪರಿಮಳ ಡಿಸೋಜಾ’ ಚಿತ್ರ ಇತ್ತೀಚೆಗೆ ಸೆನ್ಸಾರ್ ಪರೀಕ್ಷೆಯಲ್ಲಿ ಪಾಸಾಗಿದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿ ಈ ಚಿತ್ರವನ್ನು ವೀಕ್ಷಿಸಿ U/A ಪ್ರಮಾಣ ಪತ್ರ ನೀಡಿದೆ.

ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆ ಆಗಿರುವ ಪರಿಮಳ ಡಿಸೋಜಾ ಚಿತ್ರದ ಟ್ರೇಲರ್ ಬಹಳ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಹತ್ತು ಲಕ್ಷಕ್ಕೂ ಅಧಿಕ ಜನರು ಈ ಟ್ರೇಲರ್ ವೀಕ್ಷಿಸಿ ಆನಂದಿಸಿದ್ದಾರೆ. ಚಿತ್ರದಲ್ಲಿ ಕೋಮಲ ಬನವಾಸೆ, ಭವ್ಯ ಅಲ್ಲದೇ ಶ್ರೀನಿವಾಸ್ ಪ್ರಭು, ವಿನೋದ್ ಶೇಷಾದ್ರಿ, ಶ್ವೇತ ರಮೇಶ್, ಪೂಜಾ ರಾಮಚಂದ್ರ, ನಾಗಮಂಗಲ ಜಯರಾಮ್, ಮೀಸೆ ಆಂಜನಪ್ಪ, ಜ್ಯೋತಿ ಮರೂರ್, ಉಗ್ರಂ ರೆಡ್ಡಿ, ಚಂದನ ಶ್ರೀನಿವಾಸ್, ಲಕ್ಷ್ಮಣ್ ಗೌಡ, ರೋಹಿಣಿ ಸೇರಿದಂತೆ ಮೊದಲಾದವರು ಅಭಿನಯಿಸಿದ್ದಾರೆ.

ವಿಲೇಜ್ ರೋಡ್ ಫಿಲಂಸ್ ಸಂಸ್ಥೆ ಲಾಂಛನದಲ್ಲಿ ಸಿನಿಮಾ ನಿರ್ಮಾಣಗೊಂಡಿದೆ. ವಿನೋದ್ ಶೇಷಾದ್ರಿ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸೆ.೧೫ ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಕರ್ನಾಟಕ ಅಲ್ಲದೇ ಚೆನ್ನೈ, ಮುಂಬೈ, ಹೈದರಾಬಾದ್ ಹಾಗೂ ವಿದೇಶಗಳಲ್ಲೂ ಈ ಚಿತ್ರ ತೆರೆಕಾಣುತ್ತಿದೆ. ಕನ್ನಡ ಸಿನಿಮಾಗಳು ಪ್ರೇಕ್ಷಕರ ಮನ ತಲುಪುವಲ್ಲಿ ಯಶಸ್ವಿ ಆಗುತ್ತಿವೆ. ಕಂಟೆಂಟ್ ಆಧಾರಿತ ಚಿತ್ರಕ್ಕೆ ಹೆಚ್ಚಿನ ಸಂಖ್ಯೆಯ ಸಿನಿಪ್ರಿಯರು ಮಣೆ ಹಾಕುತ್ತಿದ್ದಾರೆ. ಈ ‘ಪರಿಮಳ ಡಿಸೋಜಾ’ ಚಿತ್ರಕ್ಕೆ ಎಷ್ಟರ ಮಟ್ಟಿಗೆ ಪ್ರತಿಕ್ರಿಯೆ ಸಿಗುತ್ತೆ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ.

RELATED ARTICLES
- Advertisment -
Google search engine

Most Popular