ಮೈಸೂರು: ಸನಾತನ ಪದಕ್ಕೆ ಇಂಗ್ಲಿಷ್‌ನಲ್ಲಿ ಪುರಾತನ ಎಂಬ ಅರ್ಥ ಇದೆ. ಇದಕ್ಕೆ ಸನಾತನ ಎನ್ನುವುದು ಶಾಶ್ವತ ಎಂಬ ವ್ಯಾಖ್ಯಾನ ನೀಡುತ್ತದೆ ಎಂದು ಆದಿಚುಂಚನಗಿರಿಯ ಶ್ರೀನಿರ್ಮಲಾನಂದ ಸ್ವಾಮೀಜಿ ವ್ಯಾಖ್ಯಾನ ಮಾಡಿದ್ದಾರೆ.
ಮೈಸೂರಿನ ಆದಿಚುಂಚನಗಿರಿಯ ಶಾಖಾಮಠದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಇದೇ ತಿಂಗಳ ೧೦ ಮತ್ತು ೧೧ನೇ ತಾರೀಖು, ಮೈಸೂರಿನ ಆದಿಚುಂಚನಗಿರಿ ಶಾಖಾಮಠದ ನೂತನ ಕಟ್ಟಡಗಳು ಲೋಕಾರ್ಪಣೆ ಆಗಲಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್ ಡಿ.ದೇವೇಗೌಡ ಭಾಗವಹಿಸಲಿದ್ದಾರೆ. ಎರಡನೇ ದಿನ ಸೆಪ್ಟೆಂಬರ್ ೧೧ ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ. ಡಿ ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಚ್ ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ನಂತರ ಸನಾತನ ಧರ್ಮದ ಬಗ್ಗೆ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಹೇಳಿಕೆ ನೀಡಿದರು.
ಅಂದರೆ ಧರ್ಮಗಳ ಉದಯವನ್ನು ನೋಡಿದರೆ, ಮುಸ್ಲಿಂ ಧರ್ಮಕ್ಕೆ ೧೬೦೦ ವರ್ಷಗಳ ಇತಿಹಾಸ ಇದೆ, ಕ್ರಿಶ್ಚಿಯನ್ ಧರ್ಮಕ್ಕೆ ೨ ಸಾವಿರ ವರ್ಷಗಳ ಇತಿಹಾಸ ಇದೆ, ಬೌದ್ಧ ಮತ್ತು ಜೈನ ಧರ್ಮಗಳೆರೆಡು ೨೫೦೦ ವರ್ಷಗಳ ಹಿಂದೆ ಶುರುವಾಗಿದ್ದು. ಆನಂತರ ಸಿಖ್ ಮತ್ತು ಯಹೂದಿ ಧರ್ಮಗಳು ಬಂದವು. ಆದರೆ, ಮಹಾಭಾರತದ ಕಾಲದಲ್ಲಿ ಕೃಷ್ಣ ಹಿಂದೂ ಧರ್ಮದ ಬಗ್ಗೆ ಹೇಳಿದ್ದಾನೆ. ಆದ್ದರಿಂದ ಹಿಂದೂ ಧರ್ಮ ಪುರಾತನವಾದುದು ಎಂಬ ಪುರಾವೆಗಳು ಹಿಂದೂ ಧರ್ಮದ ಬಗ್ಗೆ ಉಲ್ಲೇಖವಾಗಿವೆ. ಹಿಂದೂ ಧರ್ಮ ಸನಾತನ ಅಥವಾ ಪುರಾತನ ಎಂಬುದಕ್ಕೆ ಸಾಕ್ಷಿ ಇದೆ. ಪ್ರಪಂಚದಲ್ಲಿ ಎಲ್ಲಾ ವ್ಯಕ್ತಿಗಳು ವಿಭಿನ್ನವಾಗಿರುತ್ತಾರೆ.
ಅದೇ ರೀತಿ ಎಲ್ಲರಿಗೂ ಬದುಕಲು ಆಮ್ಲಜನಕ ಬೇಕೇಬೇಕು. ಆಮ್ಲಜನಕ ಇಲ್ಲದೇ ಹೋದರೆ ಮನುಷ್ಯ ಏನಾಗುತ್ತಾನೆ ಊಹಿಸಿ ಎಂದು ಹೇಳುವ ಮೂಲಕ ಸನಾತನ ಧರ್ಮ ಎಲ್ಲಾ ಧರ್ಮಗಳಿಗೂ ಪುರಾತನವಾದುದು ಎಂದು ಆದಿಚುಂಚನಗಿರಿಯ ಶ್ರೀಗಳಾದ ಶ್ರೀ ನಿರ್ಮಲನಾಂದ ಸ್ವಾಮೀಜಿಗಳು ಪರೋಕ್ಷವಾಗಿ ಸನಾತನ ಧರ್ಮ ಶಾಶ್ವತ ಎಂದು ಹೇಳಿಕೆ ನೀಡಿದರು.