ಪಾರಸ್ ಪೃಥ್ವಿ ಜುವೆಲರ್ಸ್ ವತಿಯಿಂದ ಛದ್ಮವೇಶ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ
ಪಿರಿಯಾಪಟ್ಟಣ: ಪಟ್ಟಣದ ಪಾರಸ್ ಪೃಥ್ವಿ ಜುವೆಲರ್ಸ್ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ 5 ವರ್ಷದ ಒಳಗಿನ ಮಕ್ಕಳಿಗೆ ರಾಧಾಕೃಷ್ಣ ಛದ್ಮವೇಶ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅಂದಾಜು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ರಾಧಾಕೃಷ್ಣ ವೇಷದಲ್ಲಿ ಕಂಗೊಳಿಸಿದರು, ತೀರ್ಪುಗಾರರ ಆಯ್ಕೆಯ ಮೂವರಿಗೆ ಬಹುಮಾನ ವಿತರಿಸಿ ಭಾಗವಹಿಸಿದ ಎಲ್ಲರಿಗೂ ನೆನಪಿನ ಪ್ರಮಾಣ ಪತ್ರ ವಿತರಿಸಲಾಯಿತು, ಮುಸ್ಲಿಂ ಧರ್ಮದ ಪುಟಾಣಿ ಕೃಷ್ಣವೇಶದಾರಿ ಸ್ಪರ್ಧೆಯಲ್ಲಿ ಬಹುಮಾನಗಳಿಸಿದ್ದು ವಿಶೇಷವಾಗಿತ್ತು.
ಪಾರಸ್ ಪೃಥ್ವಿ ಜುವೆಲರ್ಸ್ ವ್ಯವಸ್ಥಾಪಕ ರಾಜು ಅವರು ಮಾತನಾಡಿ ಸಂಸ್ಥೆ ವತಿಯಿಂದ ಮುಖ್ಯಸ್ಥರ ಮಾರ್ಗದರ್ಶನದಲ್ಲಿ ಗುಣಮಟ್ಟದ ಚಿನ್ನಾಭರಣ ಮಾರಾಟ ಜತೆಗೆ ಹಲವು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ, ರಾಧಾಕೃಷ್ಣ ಛದ್ಮವೇಷ ಸ್ಪರ್ಧೆಯಲ್ಲಿ ನಿರೀಕ್ಷೆಗೂ ಮೀರಿ ಪುಟಾಣಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದು ಸಂತಸ ಎನಿಸುತ್ತದೆ ಎಂದರು.
ಈ ಸಂದರ್ಭ ಸಂಸ್ಥೆಯ ಸಿಬ್ಬಂದಿ ಅಖಿಲ್, ಅಭಿ ಅರಸ್, ರೇವತಿ, ಮಂಜುನಾಥ್, ರಜಿನಿ, ಸುಲೋಚನಾ, ಜಗನ್ನಾಥ್, ಮತ್ತಿತರಿದ್ದರು.