ಹೆಚ್.ಡಿ.ಕೋಟೆ : ರಾಜ್ಯದಲ್ಲಿರುವ ಬುಡಕಟ್ಟು ಆಶ್ರಮಶಾಲೆಗಳ ಮಕ್ಕಳಲ್ಲಿ ರಕ್ತಹೀನತೆಕಂಡುಬರುತ್ತಿದ್ದು, ಸರ್ಕಾರಕ್ಷೀರಭಾಗ್ಯಯೋಜನೆಯನ್ನು ಬುಡಕಟ್ಟು ಆಶ್ರಮಶಾಲೆಗಳ ಮಕ್ಕಳಿಗೂ ವಿಸ್ತರಣೆ ಮಾಡಬೇಕೆಂದು ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಉಪನಿರ್ದೇಶಕಿ ಬಿ.ಎಸ್. ಪ್ರಭಾಅರಸ್ ಮನವಿ ಮಾಡಿದರು.
ಹೆಚ್.ಡಿ. ಕೋಟೆಯ ಸರಗೂರುತಾಲ್ಲೂಕಿನಚನ್ನಗುಂಡಿಆಶ್ರಮಶಾಲೆಯಲ್ಲಿಕೆಬ್ಬೆಪುರ, ನಂಜನಗೂಡುತಾಲ್ಲೂಕಿನ ನಾಗಣಾಪುರಆಶ್ರಮಶಾಲೆ, ವೆಂಕಟಗಿರಿಆಶ್ರಮ ಶಾಲೆಯ ಸುಮಾರು ೨೦೦ ಮಕ್ಕಳಿಗೆ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಜೆ.ಎಸ್.ಎಸ್. ಉನ್ನತಶಿಕ್ಷಣ ಸಂಸ್ಥೆ, ವಾಕ್ ಮತ್ತು ಶ್ರವಣ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದಉಚಿತ ಆರೋಗ್ಯತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ೨೧ ಆಶ್ರಮಶಾಲೆಗಳಿದ್ದು, ೨೫೦೦ ಮಕ್ಕಳಿದ್ದಾರೆ.
ಇದರಲ್ಲಿ ಈಗಾಗಲೇ ೮ ಆಶ್ರಮಶಾಲೆಗಳ ೭೪೦ ಮಕ್ಕಳ ಆರೋಗ್ಯತಪಾಸಣೆ ನಡೆಸಲಾಗಿದೆ. ಚನ್ನಗುಂಡಿಆಶ್ರಮಶಾಲೆಯಲ್ಲಿಜೇನುಕುರುಬ, ಬೆಟ್ಟಕುರುಬ, ಸೋಲಿಗ ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ. ಶಿಬಿರದಲ್ಲಿ ಕಿವಿ, ಮೂಗು, ಗಂಟಲು, ರಕ್ತ ಪರೀಕ್ಷೆ, ದಂತ ಪರೀಕ್ಷೆ, ನೇತ್ರ ಪರೀಕ್ಷೆ, ವಾಕ್‌ಶ್ರವಣ ಸಮಸ್ಯೆಗಳ ಬಗ್ಗೆ ಚಿಕಿತ್ಸೆ ನೀಡಲಾಗಿದೆ. ಉಚಿತವಾಗಿಎಲ್ಲಾ ಮಕ್ಕಳಿಗೂ ಔಷಧಿಯನ್ನು ವಿತರಿಸಲಾಗಿದೆ. ಈ ಶಿಬಿರದಲ್ಲಿ ಭಾಗವಹಿಸಿದ ತಜ್ಞವೈದ್ಯರುಆಶ್ರಮಶಾಲೆಯ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿಡಾ. ಮಹಾದೇವಪ್ಪ, ಡಾ. ಎಂ.ಡಿ. ಇಂದಿರಾ, ಸಮುದಾಯಆರೋಗ್ಯಾಧಿಕಾರಿಡಾ. ರವೀಶ್‌ಗಣಿ, ಡಾ. ಮಾಧುರ್ಯಬಿ.ಎಸ್., ಡಾ. ಹರ್ಷ, ಡಾ. ಜವಹಾರ್, ಡಾ. ಅಲೈಕ, ಮಹೇಂದ್ರ, ರಾಜ ಎಂ., ವಿಜಯಕುಮಾರ್, ತಾಲ್ಲೂಕುಕಲ್ಯಾಣಾದಿಕಾರಿಅರುಣ್‌ಪ್ರಭು, ಕಛೇರಿಅಧೀಕ್ಷಕ ನಾಗರಾಜ್ ಮುಖ್ಯ ಶಿಕ್ಷಕರಾದ ಷಣ್ಮುಖಆರಾಧ್ಯ, ಅಶೋಕ್, ಕೃಷ್ಣಂರಾಜು, ಶಿವಲಿಂಗನಾಯ್ಕ, ನಿಧಿಮಂಜುನಾಥ್ ಉಪಸ್ಥಿತರಿದ್ದರು.