Saturday, April 19, 2025
Google search engine

Homeಅಪರಾಧಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ: ಇಬ್ಬರು ಸಾವು

ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ: ಇಬ್ಬರು ಸಾವು

ಬೆಂಗಳೂರು: ನೈಸ್‌ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಈಚರ್‌ ಗೂಡ್ಸ್‌ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ತಲಘಟ್ಟಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಕೊಳತ್ತೂರು ಗ್ರಾಮದ ನಿವಾಸಿ ಮಹೇಶ್‌ (43) ಮತ್ತು ಅವರ ಸಹೋದರಿಯ ಪುತ್ರಿ, ನುಗ್ಗೆಹಳ್ಳಿ ಕೊಪ್ಪಲು ಗ್ರಾಮದ ನಿವಾಸಿ ಅಭಿಲಾಷಾ (26) ಮೃತರು.

ಮಹೇಶ್‌ ನಗರದಲ್ಲಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಅಭಿಲಾಷಾ ಮೈಸೂರು ರಸ್ತೆಯಲ್ಲಿರುವ ಕಂಪನಿಯಲ್ಲಿ ಕಂಪ್ಯೂಟರ್‌ ಆಪರೇಟರ್‌ ಆಗಿದ್ದರು. ಮಹೇಶ್‌ ತಾತಗುಣಿಯಲ್ಲಿ ವಾಸವಾಗಿದ್ದರು. ಅವರ ಮನೆ ಸಮೀಪದಲ್ಲೇ ಅಭಿಲಾಷ ಕೂಡ ನೆಲೆಸಿದ್ದರು.

ಬುಧವಾರ ರಾತ್ರಿ ಅಭಿಲಾಷ ಕೆಲಸ ಮುಗಿಸಿಕೊಂಡು ಮಹೇಶ್‌ ಜತೆ ಹೋಂಡಾ ಆಕ್ಟೀವಾದಲ್ಲಿ ಮನೆಗೆ ಇದೇ ಮಾರ್ಗದಲ್ಲಿ ಹೋಗುತ್ತಿದ್ದರು. ಕನಕಪುರ ರಸ್ತೆ ಕಡೆ ಹೋಗುವ ನಾಗೇಗೌಡನ ಪಾಳ್ಯ ಸೇತುವೆ ಹತ್ತಿರದ ನೈಸ್‌ರಸ್ತೆ ಬದಿಯಲ್ಲಿ ಈಚರ್‌ ಗೂಡ್ಸ್‌ ವಾಹನ ಚಾಲಕ ಇಂಡಿಕೇಟರ್‌ ಹಾಕದೇ ನಿಲ್ಲಿಸಿದ್ದ. ಅದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದುಕೊಂಡಿದ್ದು, ಇಬ್ಬರಿಗೂ ಗಂಭೀರ ಗಾಯವಾಗಿತ್ತು. ಕೂಡಲೇ ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರೂ, ಮಾರ್ಗ ಮಧ್ಯೆಯೇ ಮೃತಪಟ್ಟಿದ್ದರು. ಈ ಸಂಬಂಧ ಗೂಡ್ಸ್‌ ವಾಹನ ಚಾಲಕನನ್ನು ಬಂಧಿಸಲಾಗಿದೆ.

RELATED ARTICLES
- Advertisment -
Google search engine

Most Popular