ಬಾಗಲಕೋಟೆ: ಬಾಗಲಕೋಟೆಯಲ್ಲಿ ವಿಶ್ವ ಫಿಜಿಯೋಥೆರಪಿ ದಿನಾಚರಣೆ ಪ್ರಯುಕ್ತ ಬಿವಿವಿ ಸಂಘದ ಪಿಜಿಯೋಥೆರಪಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ನಗರದ ವಿದ್ಯಾಗಿರಿ ಕಾಲೇಜ್ ಸರ್ಕಲ್ ನಿಂದ ಪಿಯು ಕಾಲೇಜ್ ವರೆಗೆ ನಡೆದ ಜಾಗೃತಿ ಜಾಥಾ ಸಾಗಿದ್ದು, ಜಾಥಾದಲ್ಲಿ ೧೫೦ ಕ್ಕೂ ಅಧಿಕ ವಿದ್ಯಾರ್ಥಿಗಳು ಫಿಜಿಯೋಥೆರಪಿ ಜಾಗೃತಿ ಮೂಡಿಸುವ ಬಿತ್ತಿ ಪತ್ರ ಹಿಡಿದು ಜಾಥಾದಲ್ಲಿ ಭಾಗಿಯಾಗಿದ್ದರು.
