Saturday, April 19, 2025
Google search engine

Homeರಾಜ್ಯಜನಪ್ರಿಯ ಸೆಂಟ್ರಲ್ ಶಾಲೆಯ ಶಿಕ್ಷಕರಿಗೆ ಜಾಲಿ ಫೋನಿಕ್ಸ್ ಕಾರ್ಯಾಗಾರ

ಜನಪ್ರಿಯ ಸೆಂಟ್ರಲ್ ಶಾಲೆಯ ಶಿಕ್ಷಕರಿಗೆ ಜಾಲಿ ಫೋನಿಕ್ಸ್ ಕಾರ್ಯಾಗಾರ

ಮಂಗಳೂರು(ದಕ್ಷಿಣ ಕನ್ನಡ): ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಶಾಲೆಯ ಶಿಕ್ಷಕರನ್ನು  ಆಧುನಿಕ ಶಿಕ್ಷಣ ನೀತಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪರಿಣತರನ್ನಾಗಿ ಮಾಡುವ ನಿಟ್ಟಿನಲ್ಲಿ  ಆಡಳಿತ ಮಂಡಳಿಯು ವತಿಯಿಂದ  ಶಿಕ್ಷಕರಿಗೆ ಒಂದು ದಿನದ ಜಾಲಿ ಫೋನಿಕ್ಸ್ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಮಕ್ಕಳಿಗೆ ಆಧುನಿಕ ರೀತಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಕರಿಗೆ ಈ ತರಬೇತಿಯನ್ನು ನೀಡಲಾಗಿದೆ. ಬೆಂಗಳೂರಿನ ಪ್ರತಿಷ್ಟಿತ ಗ್ರಾಸ್ ಹೊಪೆರ್ ಸಂಸ್ಥೆಯ ಮುಖ್ಯಸ್ಥೆ ವಿನೋಧಿನಿ ರವರು ಜಾಲಿ ಫೋನಿಕ್ಸ್ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಕಾರ್ಯಾಗಾರದಲ್ಲಿ ಭಾಗವಹಿಸಿದ ಜನಪ್ರಿಯ ಶಾಲೆಯ ಶಿಕ್ಷಕರಿಗೆ ಚಟುವಟಿಕೆ ಆಧಾರಿತ ಕಲಿಕೆ, ಇಂಗ್ಲಿಷ್ ಅಕ್ಷರದ ಮೂಲ ಉಚ್ಚಾರಗಳು, ಶಬ್ದಕೋಶಗಳು, ಮಕ್ಕಳಿಗೆ ಅತಿ ಹೆಚ್ಚು ಪದರಚನೆ ಮಾಡುವ ಕೌಶಲ್ಯ ಹೆಚ್ಚಿಸುವ ಕ್ರಮಗಳು ಹೀಗೆ ಹಲವಾರು ವಿಚಾರಗಳ ಬಗ್ಗೆ ತರಬೇತಿಯನ್ನು ನೀಡಲಾಯಿತು.

ತರಬೇತಿ ಪಡೆದ ಶಿಕ್ಷಕರಿಗೆ ಗ್ರಾಸ್ ಹೋಪರ್ ಸಂಸ್ಥೆಯ ವತಿಯಿಂದ ಪ್ರಮಾಣ ಪತ್ರವನ್ನು ನೀಡಲಾಯಿತು.

ಈ ತರಬೇತಿ ಪಡೆದ ಶಿಕ್ಷಕರು ಎಲ್.ಕೆ.ಜಿ., ಯು.ಕೆ.ಜಿ. ಮಕ್ಕಳು ಮಾತ್ರವಲ್ಲದೇ  ಒಂದನೇ  ಹಾಗೂ ಎರಡನೇ ತರಗತಿಯ ಮಕ್ಕಳಿಗೂ ಪ್ರತ್ಯೇಕ ಫೋನಿಕ್ಸ್ ತರಗತಿಗಳನ್ನು ಹಮ್ಮಿಕೊಳ್ಳಲಿದ್ದು, ಇತರೆ ಹಿರಿಯ ತರಗತಿಗಳಲ್ಲಿ ಇಂಗ್ಲಿಷ್ ಹಾಗೂ ಬಾಕಿ ವಿಷಯಗಳೊಂದಿಗೆ ಫೋನಿಕ್ಸ್ ಅನ್ನು ಬಳಕೆ ಮಾಡಿ ಮಕ್ಕಳಿಗೆ ಕಲಿಸಲಿದ್ದಾರೆ ಎಂದು ಜನಪ್ರಿಯ ಶಾಲೆಯ ಆಡಳಿತ ಮಂಡಳಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular