ಮಂಡ್ಯ: ತಮಿಳುನಾಡಿಗೆ ನೀರು ನಿಲ್ಲಿಸಿದ್ರು ಕಾವೇರಿ ಹೋರಾಟ ಮುಂದುವರೆದಿದ್ದು, ಕೆಆರ್ ಎಸ್ ಜಲಾಶಯದ ಮುಖ್ಯದ್ವಾರದ ಬಳಿ ಪ್ರತಿಭಟನೆ ಭಜನೆ ಮಾಡುವ ಮೂಲಕ ಭೂಮಿ ತಾಯಿ ಹೋರಾಟ ಸಮಿತಿ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಕಾವೇರಿ ನೀರಿನ ವಿವಾದ ಕುರಿತ ಸಾಹಿತ್ಯ ರಚಿಸಿ ತಾಳಮೇಳದೊಂದಿಗೆ ಹಾಡು ಹಾಡಿ ಪ್ರತಿಭಟನಾಕಾರರು ಸರ್ಕಾರದ ನಡೆ ಖಂಡಿಸಿದ್ದಾರೆ.
ಸರ್ಕಾರದ ರೈತರ ಹೋರಾಟಕ್ಕೆ ಮಣಿದು ನೀರು ನಿಲ್ಲಿಸಿಲ್ಲ. ಸ್ಟಾಲಿನ್ ಸೂಚನೆ ಮೇರೆಗೆ ನೀರು ನಿಲ್ಲಿಸಿದ್ದಾರೆ. ನೀರು ಸಂಗ್ರಹ ಇಲ್ಲದಿದ್ದಾಗ ನೀರು ಬಿಟ್ಟು ದ್ರೋಹ ಎಸಗಿದ್ದಾರೆ. ರೈತನ ಸಿಟ್ಟು ರೆಟ್ಟೆಗೆ ಬಂದರೆ ಸರ್ಕಾರಕ್ಕೆ ಬುದ್ದಿ ಕಲಿಸುತ್ತಾನೆ ಎಂದು ಪ್ರತಿಭಟನಾಕಾರರು ಹರಿಹಾಯ್ದರು.
ಇದೇ ವೇಳೆ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಡಬೇಕು, ವೈಜ್ಞಾನಿಕವಾಗಿ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು.