ಹನೂರು:ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದೆಂದು ಒತ್ತಾಯಿಸಿ ಹನೂರು ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪಧಾದಿಕಾರಿಗಳು ಉಪತಹಸಿಲ್ದಾರ್ ಗೆ ಶುಕ್ರವಾರದಂದು ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ನಮ್ಮ ಕರ್ನಾಟಕದ ರೈತರು ನೀರಿಲ್ಲದೆ ಸಂಕಷ್ಟದಲ್ಲಿದ್ದಾರೆ. ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದು ಈಗಿರುವಾಗ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡದಂತೆ ಹನೂರು ಪಟ್ಟಣದಲ್ಲಿ ಉಪ ತಹಸಿಲ್ದಾರ್ ಮುಖೇನಾ ಸರ್ಕಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಪಧಾದಿಕಾರಿಗಳು ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಹನೂರು ತಾಲ್ಲೂಕು ಅಧ್ಯಕ್ಷ ರಾದ ನೆಹಮದ್ ಪಾಷಾ, ಕಾರ್ಯದರ್ಶಿ ರಾಹಿಲ್ ಬೆಗ್, ಉಪಾಧ್ಯಕ್ಷರು ಶಿವರಾಜ್, ಖಜಾಂಜಿ ಅಕ್ಮಲ್ , ಸಂಚಾಲಕರಾದ ಸದ್ದಾಮ್ ಹಾಜರಿದ್ದರು.