ಮೈಸೂರು: ಶ್ರೀ ಚಾಮಂಡೇಶ್ವರಿ ಸನ್ನಿದಿ ಕಲಾವಿದರ ಸಂಘದವರು ನಾಲ್ಕನೇ ವಾರ್ಷಿಕೋತ್ಸವ ಹಾಗೂ ರಂಗವೈಭವ ಅಂಗವಾಗಿ ಶುಕ್ರವಾರ ನಗರದ ಪುರಭವನದಲ್ಲಿ ದಾನಶೂರ ಕರ್ಣ ಪೌರಾಣಿಕ ನಾಟಕ ಪ್ರದರ್ಶಿಸಿದರು.
ಮಂಡ್ಯದ ಡಿ.ಸಿ.ಚೇತನ್ ಅವರ ವಜ್ರೇಶ್ವರಿ ಡ್ರಾಮಾ ಸೀನರಿಯಿಂದ ಅಲಂಕೃತವಾದ ರಂಗಸಜ್ಜಿಕೆಯಲ್ಲಿ ಎಚ್.ಪಿ. ನಾಗೇಂದ್ರಪ್ರಸಾದ್ ಅವರ ನಿರ್ದೇಶನದಲ್ಲಿ ನಡೆದ ನಾಟಕಕ್ಕೆ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಚಾಲನೆ ನೀಡಿದರು. ನಿವೃತ್ತ ಪ್ರಾಂಶುಪಾಲ ಶಿ.ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಆಲನಹಳ್ಳಿ ಶಾಶ್ವತ ಸೇವಾ ಶಾಲೆಯ ಕಾರ್ಯದರ್ಶಿ ಎಂ.ಆರ್.ಚೌಧರಿ, ವ್ಯವಸ್ಥಾಪಕರಾದ ಸುವರ್ಣ, ವೆಂಕಟೇಗೌಡ, ಪೊಲೀಸ್ ಇಲಾಖೆಯ ಎಸ್.ಮಂಜುನಾಥ್,, ಕಾಳಪ್ಪ, ಮರೀಗೌಡ, ಎಲ್.ಎಸ್.ಮಹದೇವಸ್ವಾಮಿ, ಬಿ.ರವಿಪ್ರಕಾಶ್, ಎಚ್.ಜಿ. ಶಿವಕುಮಾರ್, ಕೆ.ಆರ್.ಲೋಕೇಶ್, ಜ್ಞಾನೇಶ್, ಸಿ.ರವಿ, ಬಿ.ಗೋವಿಂದರಾಜು, ಬೋರಲಿಂಗು, ಎಂ.ಜಿ.ಶ್ಯಾಮಣ್ಣ, ಮಹದೇವು ಮೊದಲಾದವರು ಇದ್ದರು.
ನಿವೃತ್ತ ಡಿವೈಎಸ್ಪಿ ಎಚ್.ಎಲ್. ಶಿವಬಸಪ್ಪ ಕರ್ಣ, ಆರ್‌ಐಇ ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎನ್. ಪ್ರಹ್ಲಾದ ಪರಶುರಾಮ ಪಾತ್ರ ನಿರ್ಹಿಸಿದರು. ಇದಲ್ಲದೇ ಶ್ರೀಕೃಷ್ಣನಾಗಿ ಮಂಜುನಾಥ್, ಧರ್ಮರಾಯನಾಗಿ ಎಲ್.ಮಲ್ಲಶೆಟ್ಟಿ, ಭೀಮನಾಗಿ ಬಸವರಾಜು, ಅರ್ಜುನನಾಗಿ ಕೆ.ಬಿ.ಶಿವರಾಜು, ದ್ರೋಣನಾಗಿ ನಿವೃತ್ತ ಎಎಸ್‌ಐ ಎಸ್.ರಾಜ, ದೇವೇಂದ್ರನಾಗಿ ನಿವೃತ್ತ ಅರಣ್ಯಾಧಿಕಾರಿ ಎ.ಬಿ.ಬಸವರಾಜು, ದುರ್ಯೋಧನನಾಗಿ ವೈ.ಎಸ್.ಶಿವಕುಮಾರ್, ನಾರದನಾಗಿ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ತಾಂಡವಮೂರ್ತಿ ಅತಿರಥ, ಬಸವನಾಗಿ ಸಿದ್ದಪ್ಪ ಎ.ಚಟ್ನಹಳ್ಳಿ, ವಿಧುರನಾಗಿ ಆರ್.ಎಸ್.ಮಲ್ಲೇಗೌಡ, ಕುಬೇರ, ಸೋಮದತ್ತ, ದುಶ್ಯಾಸನನಾಗಿ ರಮೇಶ್ ಚಟ್ನಹಳ್ಳಿ, ವಾಯು ಮತ್ತು ಅಶ್ವತ್ಥಾಮನಾಗಿ ಕೆ.ಸಿದ್ದಾಚಾರ್ ಪಾತ್ರ ನಿರ್ಪಹಿಸಿದರು.
ಕುಂತಿ, ರಾಧೆಯಾಗಿ ನಿರ್ಮಲಾ, ಸೋಮಪ್ರಭೆಯಾಗಿ ಧನುಶ್ರೀ, ದ್ರೌಪದಿಯಾಗಿ ಚಿಕ್ಕರೇಖಾ, ವೃಷಿಖೇತುವಾಗಿ ಮೇಘನಾ ಪಾತ್ರ ನಿರ್ವಹಿಸಿದರು. ರಾಧಾ ಮತ್ತು ತಂಡದಿಂದ ನೃತ್ಯ ಪ್ರದರ್ಶನ ಇತ್ತು. ಎಚ್.ಪಿ.ನಾಗೇಂದ್ರಪ್ರಸಾದ್ ಹಾರ್ಮೋನಿಯಂ, ಬಿ.ಶಿವಕುಮಾರ್ ತಬಲಾ, ಪಿ.ಲೋಕೇಶ್ ಕ್ಯಾಷಿಯೋ, ಹರೀಶ್ ತಾಳವಾದ್ಯ ನುಡಿಸಿದರು.