ಮೈಸೂರು: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ, ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ವಿರೋಧಿಸಿ ಬಿಜೆಪಿ ರೈತ ಮೋರ್ಚಾ ವತಿಯಿಂದ ನಗರದ ಪುರಭವನದ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.
ಈ ಬಾರಿ ಉತ್ತಮ ಮಳೆಯಾಗದಿದ್ದರಿಂದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿಲ್ಲ. ರೈತರ ಬೆಳೆಗಳು ಒಣಗುತ್ತಿವೆ. ಭವಿಷ್ಯದಲ್ಲಿ ಕುಡಿಯಲೂ ನೀರಿಲ್ಲದೆ ಸಮಸ್ಯೆಯಾಗುತ್ತದೆ. ಆದರೆ, ರಾಜ್ಯ ಸರ್ಕಾರ ರೈತರ ಹಿತಾಸಕ್ತಿ ಕಡೆಗಣಿಸಿ ತಮಿಳುನಾಡಿಗೆ ನೀರು ಬಿಟ್ಟಿದೆ. ಸುಪ್ರೀಂ ಕೋರ್ಟ್ ಆದೇಶಕ್ಕೂ ಮುನ್ನವೇ ನೀರು ಹರಿಸಿ ರಾಜ್ಯದ ಜನರಿಗೆ ದ್ರೋಹ ಬಗೆದಿದೆ. ಅಲ್ಲದೆ ನೀರಾವರಿ ಯೋಜನೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ಕೇಂದ್ರ ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ರಾಜ್ಯ ಸರ್ಕಾರ ಕೊಡುತ್ತಿದ್ದ ಅನುದಾನ ಕಡಿತ ಮಾಡಿದೆ ಎಂದು ಕಿಡಿ ಕಾರಿದರು.
ಈ ವೇಳೆ ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಮಹಿಷ ದಸರಾ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ, ತಡೆದೇ ತಡೆಯುತ್ತೇವೆ. ಚಾಮುಂಡಿ ಬೆಟ್ಟದಲ್ಲಿ ರಾತ್ರಿಯಿಡೀ ಮಲಗಿ ಮಹಿಷ ದಸರಾ ಆಚರಣೆ ತಡೆಯುತ್ತೇವೆ. ಸಾಂಸ್ಕೃತಿಕ ನಗರಿಯಲ್ಲಿ ಮಹಿಷ ದಸರಾ ಆಚರಣೆಗೆ ಅವಕಾಶ ನೀಡುವುದಿಲ್ಲ. ಮಹಿಷ ದಸರಾ ಆಚರಣೆ ತಡೆಯಲು ಈಗಾಗಲೇ ರುಪುರೇಷೆ ಸಿದ್ದಪಡಿಸುತ್ತಿದ್ದೇವೆ. ದಸರಾ ಸಂದರ್ಭದಲ್ಲಿ ಪೂಜೆ, ಪ್ರಸಾದ ಚಾಮುಂಡಿಗೆ ಮಾತ್ರ ಸಲ್ಲಬೇಕು. ಅದೇಗೆ ಮಹಿಷ ದಸರಾ ಆಚರಣೆ ಮಾಡುತ್ತಾರೋ ನೋಡುತ್ತೇವೆ ಎಂದರು.
ಬಹು ಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಹುಟ್ಟುಹಬ್ಬವನ್ನು ಸ್ಮಶಾನದಲ್ಲಿ ಮಾಡಿಕೊಳ್ಳಲಿ. ಅದು ಅವರವರ ಇಷ್ಟ. ಆದರೆ, ಈ ಕೆಟ್ಟ ಆಚರಣೆ ಮೂಲಕ ಬಹುಸಂಖ್ಯಾತರ ಭಾವನೆಗಳ ವಿರುದ್ಧ ನಿಂತಿದ್ದಾರೆ. ಬೇಕೆಂದರೆ ಅವರವರ ಮನೆಯಲ್ಲಿ ಮಹಿಷ ದಸರಾ ಆಚರಿಸಿಕೊಳ್ಳಲಿ. ಮಹಿಷ ದಸರಾ ಆಚರಣೆಯ ಹಿಂದಿನ ದಿನವೇ ನಾವೆಲ್ಲರೂ ಚಾಮುಂಡಿಬೆಟ್ಟಕ್ಕೆ ತೆರಳಿ ಮಲಗುತ್ತೇವೆ. ಆ ಮೂಲಕ ಮಹಿಷ ದಸರಾ ಆಚರಣೆಗೆ ನಾವು ಬಿಡುವುದಿಲ್ಲ ಎಂದರು.
ಪ್ರತಿಭಟನೆಯಲ್ಲಿ ಮೇಯರ್ ಶಿವಕುಮಾರ್, ಮಾಜಿ ಶಾಸಕ ಎಲ್.ನಾಗೇಂದ್ರ, ಮುಖಂಡರಾದ ಕೌಟಿಲ್ಯ ರಘು, ಯಶಸ್ವಿನಿ ಸೋಮಶೇಖರ್, ಮಿರ್ಲೆ ಶ್ರೀನಿವಾಸ ಗೌಡ, ಹೇಮಂತ್ ಕುಮಾರ್, ಅನಿಲ್ ಥಾಮಸ್, ಅನೂಜ್ ಸ್ವಾರಸ್ವತ್, ನಗರ ಕಾರ್ಯದರ್ಶಿ ಗಿರಿಧರ್, ವಾಣೀಶ್, ಸೋಮಶೇಖರ್, ಕವೀಶ್ ಗೌಡ, ಶಿವಕುಮಾರ್, ಮೋಹನ್ ಕುಮಾರ್ ಗೌಡ, ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮಾ ನಂದೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.