ಮೈಸೂರು: ಸ್ವಾತಂತ್ರ್ಯಅಮೃತ ಮಹೋತ್ಸವದ ಸರಣಾರ್ಥ ನವದೆಹಲಿಯಲ್ಲಿರುವ ನಿರ್ಮಿಸಲಿರುವ ಸಾರಕಉದ್ಯಾನಕ್ಕೆ ಕಳುಹಿಸುವ ಮಣ್ಣು ಸಂಗ್ರಹಿಸುವ ನನ್ನದೇಶ ನನ್ನ ಮಣ್ಣುಕಾರ್ಯಕ್ಕೆ ಶನಿವಾರ ಚಾಲನೆ ನೀಡಲಾಯಿತು.
ನಗರ ಬಿಜೆಪಿ ಘಟಕದ ವತಿಯಿಂದಕೋಟೆಆಂಜನೇಯಸ್ವಾಮಿದೇವಸ್ಥಾನದಆವರಣದಲ್ಲಿ ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಮಣ್ಣು ಸಂಗ್ರಹಿಸಲಾಯಿತು. ಬಳಿಕ ವಾರ್ಡ್‌ಗಳಲ್ಲಿ ಮಣ್ಣು ಸಂಗ್ರಹಿಸುವುದಾಗಿ ಮುಖಂಡರು ತಿಳಿಸಿದರು. ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷತುಂಬಿದ ನೆನಪಿನಲ್ಲಿ ನವದೆಹಲಿಯಕರ್ತವ್ಯ ಪಥದಲ್ಲಿಅಮೃತಉದ್ಯಾನ ನಿರ್ಮಾಣಕ್ಕೆದೇಶಾದ್ಯಂತ ಮಣ್ಣನ್ನು ಸಂಗ್ರಹ ಮಾಡಲಾಗುತ್ತಿದೆ. ಇದು ಹುತಾತ್ಮ ಸೈನಿಕರು, ಪೊಲೀಸರಿಗೆಗೌರವ ಸಮರ್ಪಿಸುವ ಐತಿಹಾಸಿಕ ಕಾರ್ಯಕ್ರಮವಾಗಿದೆಎಂದು ಹೇಳಿದರು.
ಮೈಸೂರಿನ ೧೦೭೪ ಬೂತ್‌ಗಳಲ್ಲಿ ಹಿಡಿ ಮಣ್ಣನ್ನು ಸಂಗ್ರಹ ಮಾಡಲಾಗುವುದು. ಬೂತ್ ಮುಖ್ಯಸ್ಥರು ಹುತಾತ್ಮರಾದವರಕುಟುಂಬದರಿಂದ ಮಣ್ಣನ್ನು ಸಂಗ್ರಹಿಸಬೇಕು. ಅವರ ಮಾಹಿತಿಯನ್ನೂ ಕಳುಹಿಸಬೇಕು ಎಂದು ಹೇಳಿದರು.
ಸರ್ದಾರ್ ವಲ್ಲಭಬಾಯಿ ಪಟೇಲ್‌ಏಕತಾ ಪ್ರತಿಮೆಗೆದೇಶಾದ್ಯಂತಕಬ್ಬಿಣ ಸಂಗ್ರಹ ಮಾಡಿದಂತೆ ಮಣ್ಣು ಸಂಗ್ರಹ ಮಾಡುತ್ತಿದ್ದೇವೆ. ಇಡೀದೇಶದ ಮಣ್ಣನ್ನುಒಂದುಕಡೆ ಸೇರಿಸಿ ಉದ್ಯಾನ ಸ್ಮಾರಕರೂಪಿಸುವ ಐತಿಹಾಸಿಕ ಕಾರ್ಯಕ್ರಮಕ್ಕೆಎಲ್ಲರೂ ಸಹಕಾರ ನೀಡಬೇಕುಎಂದು ಹೇಳಿದರು. ಬಿಜೆಪಿ ಮುಖಂಡರಾದಗಿರಿಧರ್, ಜೋಗಿ ಮಂಜು, ನೇಹಾ, ಮಾಧ್ಯಮ ಸಂಚಾಲಕ ಮಹೇಶ್‌ರಾಜೇಅರಸ್ ಮುಂತಾದವರಿದ್ದರು.
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಬಲ: ಸೂರು: ಬಿಜೆಪಿ ಮತ್ತುಜೆಡಿಎಸ್ ಮೈತ್ರಿಯಿಂದ ಲೋಕಸಭೆಚುನಾವಣೆಗೆ ಬಲ ಕೊಡುತ್ತದೆಎಂದು ಶಾಸಕ ಟಿ.ಎಸ್.ಶ್ರೀವತ್ಸ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದಅವರು, ಲೋಕಸಭಾಚುನಾವಣೆಯಲ್ಲಿಒಂದೊಂದು ಸ್ಥಾನವೂ ಮುಖ್ಯವಾದದ್ದು, ೨೦೧೯ರ ಚುನಾವಣೆಯಲ್ಲಿ ಗಳಿಸಿದ ಸೀಟುಗಳನ್ನು ಉಳಿಸಿಕೊಳ್ಳಲು ಮೈತ್ರಿ ಸಹಕಾರಿಯಾಗಲಿದೆಎಂದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಅವರಿಗೆಒಂದೊಂದು ಭಾಗದಲ್ಲಿ ಪ್ರಭಾವಇದೆ. ಇದು ಪಕ್ಷಕ್ಕೆ ಅನುಕೂಲವಾಗಲಿದೆ. ಕೇಂದ್ರ ಮತ್ತುರಾಜ್ಯ ನಾಯಕರ ನಿರ್ಧಾರವನ್ನು ಸ್ವಾಗತ ಮಾಡುತ್ತೇವೆ. ಅಸಮಾಧಾನಕಾಣುತ್ತಿಲ್ಲಎಂದು ಹೇಳಿದರು.
ಮುಖಂಡರು ಮಾತ್ರವಲ್ಲದೇಕಾರ್ಯಕರ್ತರುಒಂದಾಗಿ ಕೆಲಸ ಮಾಡಬೇಕು. ತಮಕೆ.ಆರ್.ಕ್ಷೇತ್ರದಲ್ಲಿಜೆಡಿಎಸ್-ಬಿಜೆಪಿ ಕಾರ್ಯಕರ್ತರನ್ನುಒಂದು ಮಾಡಬೇಕಾದ್ದು ನನ್ನಜವಾಬ್ದಾರಿ. ನಾಯಕರುಒಂದಾದರೆ ಸಾಲದು, ಕಾರ್ಯಕರ್ತರುಒಂದಾಗಬೇಕುಎಂದು ತಿಳಿಸಿದರು.