ಮಂಡ್ಯ: ಕಾವೇರಿಗೆ ರಾಜಕೀಯ ಪುಡಾರಿಗಳು ಬಾಗೀನ ಅರ್ಪಿಸುವುದು ಬೇಡ. ಕನ್ನಂಬಾಡಿ ಕಟ್ಟೆಗೆ ಒಡೆಯರ್ ಮನೆತನದವರೇ ಪೂಜೆ ಸಲ್ಲಿಸಿ ಎಂದು ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಗೆ ರೈತಮುಖಂಡರು ಮನವಿ ಮಾಡಿದ್ದಾರೆ.
ಕೆಲವರು ಪಾಪಿಷ್ಠರು ಪುಡಾರಿಗಳ ಜೊತೆ ಬಂದು ಪೂಜೆ ಮಾಡಿ ಕಟ್ಟೆ ಬರಿದಾಗಿದೆ. ನಮ್ಮ ಮಹಾರಾಜರು ಕಟ್ಟಿದಂತ ಕಟ್ಟೆಗೆ ಕಳಂಕ ತರುತ್ತಿದ್ದಾರೆ. ಮಹಾರಾಜರು ಕೊಟ್ಟ ಕೊಡುಗೆಗೆ ಗೋಮುಖ ವ್ಯಾಘ್ರವಾಗಿ ನಡೆದುಕೊಳ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದ ಜನರಿಗಾಗಿ ಮಹಾರಾಜರು ಕಟ್ಟಿದಂತ ಕಟ್ಟೆ . ಯಾವ ರಾಜಕಾರಣಿ, ಪ್ರಧಾನ ಮಂತ್ರಿ ಮನೆ ಮಾರಿ ಕನ್ನಂಬಾಡಿ ಕಟ್ಟೆ ಕಟ್ಟಿಲ್ಲ. ಪ್ರತಿವರ್ಷ ನೀವೆ ಕಾವೇರಮ್ಮಗೆ ಬಾಗಿನ ಅರ್ಪಿಸಬೇಕು. ಈಗಲೂ ದಂಪತಿಗಳ ಸಮೇತ ಕಾವೇರಿ ಮಾತೆಗೆ ಪೂಜೆ ಮಾಡಿದರೆ ಕಟ್ಟೆ ತುಂಬುತ್ತದೆ ಎಂದು ರೈತ ಮುಖಂಡರು ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಗೆ ಮನವಿ ಸಲ್ಲಿಸಿದರು.