Sunday, April 20, 2025
Google search engine

Homeಅಪರಾಧಲಾರಿ ಡಿಕ್ಕಿಯಾಗಿ ಮಹಿಳೆಯರ ಮೇಲೆ ಹರಿದ ಟೆಂಪೋ ಟ್ರಾವೆಲರ್: 7 ಮಂದಿ ಸಾವು

ಲಾರಿ ಡಿಕ್ಕಿಯಾಗಿ ಮಹಿಳೆಯರ ಮೇಲೆ ಹರಿದ ಟೆಂಪೋ ಟ್ರಾವೆಲರ್: 7 ಮಂದಿ ಸಾವು

ತಮಿಳುನಾಡು: ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ನಟ್ರಂಪಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಲಾರಿ ಟೆಂಪೋ ಟ್ರಾವೆಲರ್‌ ಗೆ ಡಿಕ್ಕಿಯಾಗಿ ಬಳಿಕ ಟೆಂಪೋ ರಸ್ತೆ ಬದಿ ಕುಳಿತಿದ್ದ ಮಹಿಳೆಯರ ಮೇಲೆ ಹರಿದಿದೆ.

ಪರಿಣಾಮ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 10 ಮಂದಿ ಗಾಯಗೊಂಡಿದ್ದಾರೆ. ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಟರಂಪಲ್ಲಿ ಅಪಘಾತದಲ್ಲಿ ಮೃತಪಟ್ಟವರನ್ನು ಎಂ.ಮೀನಾ (50), ಡಿ.ದೇವಯಾನಿ (32), ಪಿ.ಸೈಟ್ಟು (55), ಎಸ್. ದೇವಿಕಾ (50), ವಿ.ಸಾವಿತ್ರಿ (42), ಕೆ. ಕಲಾವತಿ (50) ಮತ್ತು ಆರ್. ಗೀತಾ (34) ಎಂದು ಗುರುತಿಸಲಾಗಿದೆ.

ಸೆ.8ರಂದು ತಮಿಳುನಾಡಿನ ಒನಗುಟ್ಟೈ ಗ್ರಾಮದ ಸುಮಾರು 45 ಮಂದಿ ಧರ್ಮಸ್ಥಳಕ್ಕೆ ತೆರಳಿದ್ದರು. ಈ ಎಲ್ಲಾ ಜನರು ತಮ್ಮ ಪ್ರಯಾಣವನ್ನು ಮುಗಿಸಿ ಹಿಂತಿರುಗುತ್ತಿದ್ದಾಗ ಅವರ ಒಂದು ವಾಹನವು ಪಂಕ್ಚರ್ ಆಯಿತು. ಇದರಿಂದಾಗಿ ಎಲ್ಲರೂ ವಾಹನದಿಂದ ಕೆಳಗಿಳಿದು ಚೇತರಿಸಿಕೊಳ್ಳುತ್ತಿದ್ದರು.

ಆದರೆ ರಸ್ತೆ ಬದಿ ನಿಂತಿದ್ದ ಟೆಂಪೋಗೆ ಹಿಂದಿನಿಂದ ಲಾರಿ ಅತಿವೇಗವಾಗಿ ಡಿಕ್ಕಿ ಹೊಡೆದಿತ್ತು. ಇದರಿಂದ ಟೆಂಪೋ ಪಲ್ಟಿಯಾಗಿ ನಿಂತಿದ್ದ ಮಹಿಳಾ ಪ್ರಯಾಣಿಕರ ಮೇಲೆ ಬಿದ್ದಿದೆ. ಟೆಂಪೋ ತೂಕದ ರಭಸಕ್ಕೆ ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಅಪಘಾತದಲ್ಲಿ ಲಾರಿ ಚಾಲಕನಿಗೂ ಗಾಯಗಳಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ, ಅಕ್ಕಪಕ್ಕದ ಜನರು ಸ್ಥಳಕ್ಕೆ ಆಗಮಿಸಿ ಅಪಘಾತದಲ್ಲಿ ಗಾಯಗೊಂಡ 10 ಜನರನ್ನು ಮೇಲಕ್ಕೆತ್ತಿದರು. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತರ ಶವಗಳನ್ನು ಸ್ಥಳದಿಂದ ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ಸಂಬಂಧ ನಾಟ್ರಂಪಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES
- Advertisment -
Google search engine

Most Popular