Saturday, April 19, 2025
Google search engine

Homeರಾಜ್ಯಸುದ್ದಿಜಾಲಧಾರ್ಮಿಕ-ವಿಧಿ ವಿಧಾನಗಳೊಂದಿಗೆ ನಡೆದ ಶನೇಶ್ವರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ, ಕುಂಭಾಭಿಷೇಕ

ಧಾರ್ಮಿಕ-ವಿಧಿ ವಿಧಾನಗಳೊಂದಿಗೆ ನಡೆದ ಶನೇಶ್ವರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ, ಕುಂಭಾಭಿಷೇಕ

ಹನೂರು: ಪಟ್ಟಣದ ದೇವಾಂಗಪೇಟೆಯಲ್ಲಿ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಮತ್ತು ಕುಂಭಾಭಿಷೇಕ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಅರ್ಚಕರಾದ ಶ್ರೇಯಸ್ ದೀಕ್ಷಿತ್ ಹಾಗೂ ಸುಭಾಷ್ ದೀಕ್ಷಿತ್ ರಾಜಾರಾಮ್ ಪೂಜಾ ಕಾರ್ಯಗಳನ್ನು ನೆರವೇರಿಸಿದರು.

ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷಂಗಳು 1945 ನೇ ಸಲ್ಲುವ ಶ್ರೀ ಶೋಭಕೃತ ನಾಮ ಸಂವತ್ಸರದ ಶ್ರಾವಣ ಮಾಸ ಕೃಷ್ಣ ಪಕ್ಷ ದ್ವಾದಶೀಯ ಸೋಮವಾರ ಸಲ್ಲುವ ಶುಭಮುಹೂರ್ತದಲ್ಲಿ ಶ್ರೀ ಆದಿತ್ಯಾದಿ ನವಗ್ರಹ ಸಮೇತ ಶ್ರೀ ಶನೇಶ್ವರಸ್ವಾಮಿ ಪ್ರತಿಷ್ಟಾ ಜೀರ್ಣೋದ್ದಾರ ಕುಂಭಾಭಿಷೇಕ ಪೂಜಾ ಕಾರ್ಯ ಧಾರ್ಮಿಕವಾಗಿ ನಡೆಯಿತು.

ಮಂಗಳವಾದ್ಯದೊಡನೆ ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ ಆಚಾರ್ಯಾದಿ ಋತ್ವಿಕ್ ವರುಣ ಪ್ರವೇಶಬಲಿ, ರಾಕ್ಟೋಜ್ಞ ಪೂಜೆ, ರಾಜ್ಞ ಹೋಮಾ, ವಾಸ್ತು ಹೋಮ, ಪರಾಗ್ನಿಕರಣ ಅಂಕುರಾರ್ಪಣ, ರಕ್ಷಾಬಂಧನ, ಅಗ್ನಿ ಪ್ರತಿಷ್ಠೆ, ಗಣಪತಿ ಹೋಮ, ಸುಬ್ರಮಣ್ಯ ಹೋಮ, ದುರ್ಗಾ ಹೋಮ, ರುದ್ರ ಹೋಮ, ಮಹಾ ಮಂಗಳಾರತಿ ಸುದರ್ಶನ ಹೋಮ, ಮೃತ್ಯುಂಜಯ ಹೋಮ, ಸೂಕ್ತ ಹೋಮಗಳು, ಅಷ್ಟ ವಾದನ ಸೇವೆ ಸ್ಪರ್ಶ ಹೋಮ, ರತ್ನನ್ಯಾಸ ಅಷ್ಟ ಬಂಧನ ಪೂರ್ವಿಕ ವಿಗ್ರಹ ಪ್ರತಿಷ್ಠಾಪನೆ ನಡೆಯುತ್ತದೆ.

ಕಳಸ ಪ್ರತಿಷ್ಠಾಪನೆ : ಜೀವನ್ಯಾಸ ತತ್ವಾನ್ಯಾಸ, ಪ್ರಾಣ ಪ್ರತಿಷ್ಠೆ, ಮೂಲ ಹೋಮಗಳು, ಕಳಶಾರ್ಚನೆ, ನಾಡಿ ಸಂಧಾನ, ಕಳಶಾರ್ಚನೆ, ಕಲಾತತ್ವ ಹೋಮ ಪೂರ್ಣಾಹುತಿ, ದಶದಾನ ಕುಂಭೋದ್ದಸನೆ ಮಹಾಮಂಗಳಾರತಿ ಆಚಾರ್ಯಾದಿ ಋತ್ವಿಕ ಪೂಜೆ ಯಾಗಫಲ ಸ್ವೀಕಾರ ಆಶೀರ್ವಾದ ಮಧ್ಯಾಹ್ನ 12 ರಿಂದ ಒಂದು ಗಂಟೆಯಲ್ಲಿ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಮಹಾಕುಂಭಾಭಿಷೇಕ ಅಲಂಕಾರ ಮಹಾಮಂಗಳಾರತಿ ನಡೆಯಿತು.

ಪ್ರಸಾದ ವಿನಿಯೋಗ: ಕುಂಭಾಭಿಷೇಕ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದ ಭಕ್ತರಿಗೆ ಇದೆ ವೇಳೆಯಲ್ಲಿ ಅನ್ನದಾಸೋಹ ಪ್ರಸಾದ ವಿನಿಯೋಗ ನಡೆಯಿತು.

RELATED ARTICLES
- Advertisment -
Google search engine

Most Popular