ಮಂಡ್ಯ: ಇಂದಿನ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ನಮ್ಮಪರವಾದ ತೀರ್ಪು ಬರಲಿದೆ ಎಂದು ಮಾಜಿ ಪರಿಷತ್ ಸದಸ್ಯ ಕೆ ಟಿ ಶ್ರೀಕಂಠೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಾಧಿಕಾರದ ಸಭೆಯಲ್ಲಿ ನಮ್ಮಪರವಾದ ತೀರ್ಪು ಬರಲಿದೆ ಎಂಬ ನಿರೀಕ್ಷೆ ಇದೆ. ನಮ್ಮಲ್ಲಿ ನೀರಿಲ್ಲದಿದ್ದರೂ ಈಗಾಗಲೇ 36 ಟಿಎಂಸಿ ನೀರು ಬಿಡಲಾಗಿದೆ ಎಂದು ತಿಳಿಸಿದರು.
ಒಂದು ವೇಳೆ ವ್ಯತಿರಿಕ್ತವಾದ ತೀರ್ಪು ಬಂದ್ರೆ ನಮ್ಮಲ್ಲೇ ನೀರಿಲ್ಲ ನೀರು ಬಿಡಲ್ಲ ಎಂಬುದನ್ನ ರಾಜ್ಯ ಸರ್ಕಾರ ಹೇಳಬೇಕು. ಒಂದು ವೇಳೆ ಸರ್ಕಾರ ನೀರು ಬಿಟ್ಟಿದ್ದೇ ಆದರೆ ನಾವು ದೊಡ್ಡಮಟ್ಟದ ಹೋರಾಟ ರೂಪಿಸಬೇಕಾಗುತ್ತೆ ಸರ್ಕಾರಕ್ಕೆ ಕೆ ಟಿ ಶ್ರೀಕಂಠೇಗೌಡ ಎಚ್ಚರಿಕೆ ನೀಡಿದರು.