ಮಂಡ್ಯ: ಬೆಂ-ಮೈ ಎಕ್ಸ್ ಪ್ರೆಸ್ ವೇ ನಲ್ಲಿ ದರೋಡೆಕೋರರ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ಕಾರು ನಿಲ್ಲಿಸಿದ್ರೆ ನಿಮ್ಮಲ್ಲಿ ಇರುವ ಚಿನ್ನಾಭರಣ, ಹಣ ಏನು ಉಳಿಯಲ್ಲ.!
ಬೆಂ-ಮೈ ಎಕ್ಸ್ ಪ್ರೆಸ್ ವೇನಲ್ಲಿ ದಿನೇ ದಿನೇ ದರೋಡೆ ಪ್ರಕರಣಗಳು ಹೆಚ್ಚಾಗಿದ್ದು, ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಒಂದೇ ಮಾದರಿಯಲ್ಲಿ 7 ದರೋಡೆ ಪ್ರಕರಣಗಳು ನಡೆದಿದೆ. ಭಾನುವಾರ ರಾತ್ರಿಯೂ ಬೆಂ-ಮೈ ಎಕ್ಸ್ ಪ್ರೆಸ್ ವೇನಲ್ಲಿ ದರೋಡೆ ನಡೆದಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂ ಪ್ಲೈ ಓವರ್ ನಲ್ಲಿ ಘಟನೆ ನಡೆದಿದ್ದು, ಕೊಡಗು ಮೂಲದ ಚಲನ್, ದೀಪ್ತಿ ದಂಪತಿಗಳಿಂದ ಖದೀಮರು ದರೋಡೆ ಮಾಡಿದ್ದಾರೆ.
ಬೆಂಗಳೂರಿನಿಂದ ಮೈಸೂರು ಕಡೆಗೆ ಮಾರುತಿ 800 ನಲ್ಲಿ ಹೋಗುತ್ತಿದಾಗ ಯಾರೋ ಇಬ್ಬರೂ ಒಂದು ಸ್ಕೂಟರ್ ನಲ್ಲಿ ಬಂದು ಯಾಕೇ ನಿಧಾನಕ್ಕೆ ಹೋಗುತ್ತಿದ್ದೀರಾ ಏನಾಗಿದೆ ನಾವು ಪೊಲೀಸರೆಂದು ಹೇಳಿ ನಮ್ಮ ಕಾರನ್ನು ಅಡಗಟ್ಟಿ, ನಮ್ಮ ಬಳಿ ಬಂದು ನಮಗೆ ಕಾರಿನ
ದಾಖಲಾತಿಗಳನ್ನು ತೋರಿಸಿ ಎಂದು ಹೇಳಿದ್ದಾರೆ. ಬಳಿಕ ದಂಪತಿಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕುತ್ತಿಗೆಗೆ ಚಾಕುವನ್ನು ಇಟ್ಟು ದಂಪತಿ ಬಳಿ ಇದ್ದ ೧೨ ಗ್ರಾಂ ಚಿನ್ನದ ಚೈನು, ೬ ಗ್ರಾಂ ನ ಚಿನ್ನದ ಉಂಗುರ, ೫ ಗ್ರಾಂ ಚಿನ್ನದ ಉಂಗುರ, ೩ ಗ್ರಾಂ ತೂಕದ ರಿಂಗ್, ೨ ಗ್ರಾಂ ತೂಕದ ಕಿವಿಯೋಲೆಯನ್ನು ಬಲವಂತವಾಗಿ ಕಸಿದುಕೊಂಡು ಪರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.