ಮದ್ದೂರು: ಪಟ್ಟಣದ ಪೊಲೀಸ್ ಠಾಣೆಯ ಇನ್ ಸೆಕ್ಟರ್ ಸಂತೋಷ್ ಅಧ್ಯಕ್ಷತೆಯಲ್ಲಿ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬ ಆಚರಣೆಯ ಹಿನ್ನೆಲೆ ಮುಸ್ಲಿಂ ಬಾಂಧವರು ಹಾಗೂ ಹಿಂದೂಗಳ ಶಾಂತಿ ಸೌಹಾರ್ದತೆ ಸಭೆ ನಡೆಯಿತು.
ಇನ್ ಸೆಕ್ಟರ್ ಸಂತೋಷ್ ಮಾತನಾಡಿ, ಪ್ರತಿಯೊಬ್ಬರೂ ಕಡ್ಡಾಯವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಅನುಮತಿ ಪಡೆಯಬೇಕು ಕೆಇಬಿ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ, ಅಗ್ನಿಶಾಮಕ ಠಾಣೆ ಇಂದ ಅನುಮತಿ ಪಡೆದು ಶಿಷ್ಟಾಚಾರದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು ಎಂದರು.
ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮುಖ್ಯಸ್ಥರೇ ಜವಾಬ್ದಾರಿಯನ್ನು ಹೊತ್ತು ರಾತ್ರಿ ಎಂಟು ಗಂಟೆ ಒಳಗೆ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಬೇಕು ಎಂದರು.
ಸಬ್ ಇನ್ ಸ್ಪೆಕ್ಟರ್ ಉಮೇಶ್, ಮುಖಂಡರಾದ ಸಂತೋಷ್, ವೆಂಕಟೇಶ್, ಪುರಸಭಾ ಸದಸ್ಯರಾದ ಆದಿಲ್ ಆಲಿಖಾನ್, ಮುಸ್ಲಿಂ ಮುಖಂಡ ಫೈರೋಜ್ ಖಾನ್, ರಫೀಕ್ ಸೇರಿದಂತೆ ಇತರರಿದ್ದರು.