Sunday, April 20, 2025
Google search engine

Homeಬ್ರೇಕಿಂಗ್ ನ್ಯೂಸ್ಕೆ.ಆರ್.ಎಸ್ ಅಣೆಕಟ್ಟೆ ಮುಂದೆ ಇರುವ ಪರ್ಷಿಯನ್ ಶಿಲಾ ಶಾಸನವೇ ಸುಳ್ಳು: ತೆರವಿಗೆ ಆಗ್ರಹ

ಕೆ.ಆರ್.ಎಸ್ ಅಣೆಕಟ್ಟೆ ಮುಂದೆ ಇರುವ ಪರ್ಷಿಯನ್ ಶಿಲಾ ಶಾಸನವೇ ಸುಳ್ಳು: ತೆರವಿಗೆ ಆಗ್ರಹ

ಮಂಡ್ಯ: ಕನ್ನಂಬಾಡಿ ಕಟ್ಟೆ ನಿರ್ಮಾಣ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಕೆ.ಆರ್.ಎಸ್ ಅಣೆಕಟ್ಟೆ ಮುಂದೆ ಇರೋ ಪರ್ಷಿಯನ್ ಶಿಲಾ ಶಾಸನವೇ ಸುಳ್ಳು ಎಂದು ಬಿಜೆಪಿ ಕಾರ್ಯಕರ್ತ ಸಿ.ಟಿ. ಮಂಜುನಾಥ್ ಗಂಭೀರವಾಗಿ ಆರೋಪಿಸಿದ್ದಾರೆ.

ಮಂಡ್ಯ ಜಿಲ್ಲಾ ಬಿಜೆಪಿ ಘಟಕದಿಂದ ಕೆಆರ್ ಎಸ್ ಡ್ಯಾಂ ಮುಂದೆ ಇರುವ ಪರ್ಷಿಯನ್ ಭಾಷೆಯ ಕಲ್ಲು ತೆರವಿಗೆ ಆಗ್ರಹಿಸಿದ್ದಾರೆ.

ಇರಾನ್ ದೇಶದ ಶಿಲಾ ಶಾಸನವನ್ನ ಟಿಪ್ಪು ಸುಲ್ತಾನ್ ಶಾಸನ ಅಂತ ಸುಳ್ಳು ಹೇಳಲಾಗುತ್ತಿದೆ. ಪರ್ಷಿಯನ್ ಭಾಷೆಯ ಶಾಸನದಲ್ಲಿ ಎಲ್ಲೂ ಟಿಪ್ಪು ಅಥವಾ ಅಣೆಕಟ್ಟೆಯ ಬಗ್ಗೆ ಮಾಹಿತಿ ಇಲ್ಲ. ಬದಲಾಗಿ ದರಾಜ್ ಅರ್ಕಾನ್ ಬಜಾರ್ ಎಂಬ ಇರಾನ್ ದೇಶದ ಸಿಹಿಗೆಣಸಿನ ಮಾರುಕಟ್ಟೆ ಬಗ್ಗೆ ಉಲ್ಲೇಖ ಇದೆ. ಇದನ್ನು ಇಲ್ಲಿಗೆ ತಂದು ಸುಳ್ಳು ಇತಿಹಾಸ ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಕೆ.ಆರ್.ಎಸ್ ನಲ್ಲಿ ಸ್ಥಾಪಿಸಲಾಗಿರುವ ಪರ್ಷಿಯನ್ ಲಿಪಿಯ ಬರಹಕ್ಕೂ, ಕನ್ನಂಬಾಡಿ ಅಣೆಕಟ್ಟೆಗೂ ಯಾವುದೇ ಸಂಬಂಧವಿಲ್ಲ. ಟಿಪ್ಪು ಸುಲ್ತಾನ್ ಹೆಸರಾಗಲಿ, ಕರ್ನಾಟಕದ ಹೆಸರಾಗಲಿ ಬರಹದಲ್ಲಿ ಇಲ್ಲ. ಪರ್ಷಿಯನ್ ಬಲ್ಲ ಪರಿಣಿತರು ಇರಾನ್ ಮಾರುಕಟ್ಟೆಯ ಕಲ್ಲು ಎಂದಿದ್ದಾರೆ. ಗೂಗಲ್ ಟ್ರಾನ್ಸ್ ಲೇಟ್ ನಲ್ಲಿ ಕೂಡ ಅದೇ ರೀತಿ ಹೋಗುತ್ತಿದೆ.  ಇತಿಹಾಸ ತಿರುಚುವ ದೃಷ್ಟಿಯಲ್ಲಿ  ಕಲ್ಲನ್ನು ಕೆ.ಆರ್.ಎಸ್ ಅಣೆಕಟ್ಟೆಯ ಮುಖ್ಯದ್ವಾರದ ಬಳಿ ಸ್ಥಾಪಿಸಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಈ ಕುರಿತು ಪರಾಮರ್ಶೆ ಮಾಡಿ ಕಲ್ಲು ತೆರವು ಮಾಡುವಂತೆ ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಸಿ.ಟಿ. ಮಂಜುನಾಥ್ ಶಿಲಾ ಶಾಸನ ತೆರವಿಗೆ ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular