ಮಂಡ್ಯ: ಮಂಡ್ಯದ ಡಿಸಿ ಕಚೇರಿ ಬಳಿ ನಿವೇಶನಕ್ಕಾಗಿ ಆಗ್ರಹಿಸಿ ಸ್ವಂತಮನೆ ನಮ್ಮ ಹಕ್ಕು ಹೋರಾಟದ ಸಮಿತಿಯಿಂದ ಪ್ರತಿಭಟನಾ ಧರಣಿ ನಡೆಸಲಾಗುತ್ತಿದೆ.
ಬೂದನೂರು ಗ್ರಾಮದ ನಿವೇಶನ ರಹಿತರಿಗೆ ಭೂಮಿ ಸಿಗದ ಹಿನ್ನಲೆ ನಿವೇಶನ ಕೊಡಿ ಇಲ್ಲ ವಿಷ ಕೊಡಿ ಎಂದು ನಿವೇಶನ ರಹಿತರಿಂದ ಧರಣಿ ಸತ್ಯಗ್ರಹ ಹಮ್ಮಿಕೊಳ್ಳಲಾಗಿದೆ.
ಕಳೆದ 8 ವರ್ಷಗಳಿಂದ ನಿವೇಶನಕ್ಕಾಗಿ ಜನರು ಹೋರಾಟ ಮಾಡುತ್ತಿದ್ದು, ಅಧಿಕಾರಿಗಳು ಲಂಚ ಪಡೆದು ನಿವೇಶನ ಕೊಡ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಡಿಸಿ ಕಚೇರಿ ಬಳಿ ಬೂದನೂರು ಗ್ರಾಮದ ನಾಗರತ್ನ ಎಂಬ ಮಹಿಳೆ ಅಧಿಕಾರಿಗಳಿಗೆ ಗ್ರಾಮೀಣಾ ಭಾಷೆಯಲ್ಲೆ ಶಾಪ ಹಾಕಿ ಛೀಮಾರಿ ಹಾಕಿದ್ದಾರೆ. ಮಾತ್ರವಲ್ಲದೇ ನಿವೇಶನ ನೀಡಿ, ಇಲ್ಲ ವಿಷ ಕುಡಿಯುವುದಾಗಿ ಜಿಲ್ಲಾಧಿಕಾರಿಗೆ ಎಚ್ಚರಿಕೆ ನೀಡಿದ್ದಾರೆ.