Sunday, April 20, 2025
Google search engine

Homeಬ್ರೇಕಿಂಗ್ ನ್ಯೂಸ್ಮಂಡ್ಯ: ಹಸು, ಎಮ್ಮೆ ಕದ್ದು ಜಾನುವಾರು ಫಾರಂ ನಿರ್ಮಾಣ ಮಾಡಿದ್ದ ಹೈಟೆಕ್ ಕಳ್ಳನ ಬಂಧನ

ಮಂಡ್ಯ: ಹಸು, ಎಮ್ಮೆ ಕದ್ದು ಜಾನುವಾರು ಫಾರಂ ನಿರ್ಮಾಣ ಮಾಡಿದ್ದ ಹೈಟೆಕ್ ಕಳ್ಳನ ಬಂಧನ

ಮಂಡ್ಯ: ಜಿಲ್ಲೆಯಲ್ಲೊಬ್ಬ ಹೈಟೆಕ್ ಜಾನುವಾರು ಕಳ್ಳ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ನಾಗಮಂಗಲ ತಾಲೂಕಿನ ಚಾಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹಸು, ಎಮ್ಮೆ ಕದ್ದು ಜಾನುವಾರು ಫಾರಂ ನಿರ್ಮಾಣ ಮಾಡಿ ಹೈನೋದ್ಯಮ ಆರಂಭಿಸಿದ್ದ ಚಾಲಾಕಿ ಕಳ್ಳ ಚಾಕೇನಹಳ್ಳಿ ಗ್ರಾಮದ ರವೀಗೌಡ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ತಾನೊಬ್ಬ ಜಾನುವಾರು ವ್ಯಾಪಾರಿ ಎಂದು ಗುರುತಿಸಿಕೊಂಡಿದ್ದ ರವೀಗೌಡ, ಹಗಲು ವೇಳೆ ಪ್ಲಾನ್ ಮಾಡಿ, ರಾತ್ರಿ ವೇಳೆ ಹಸು, ಎಮ್ಮೆ ಕಳ್ಳತನ ಮಾಡುತ್ತಿದ್ದ. ಕದ್ದ ಹಸು, ಎಮ್ಮೆಯನ್ನು ತನ್ನ ಫಾರಂನಲ್ಲಿಯೇ ಸಾಕಾಣಿಕೆ ಮಾಡುತ್ತಿದ್ದ. ಬಳಿಕ ಹಂತ ಹಂತವಾಗಿ ಜಾನುವಾರುಗಳ ಮಾರಾಟ ಮಾಡುತ್ತಿದ್ದ.

ತಿಂಗಳ ಹಿಂದೆ ರವೀಗೌಡ ಅಂಡ್ ಗ್ಯಾಂಗ್ ಹಲಗೂರು, ಚನ್ನಪಟ್ಟಣ, ಚನ್ನರಾಯಪಟ್ಟಣ ಭಾಗದಲ್ಲಿ ಹಸುಗಳ ಕಳ್ಳತನ ಮಾಡಿತ್ತು. ಈ ಸಂಬಂಧ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು.

ಸ್ಥಳೀಯರ ಮಾಹಿತಿ ಮೇರೆಗೆ ಬೆಳ್ಳೂರು ಪೊಲೀಸರ ಸಹಕಾರದೊಂದಿಗೆ ಕೆ.ಆರ್.ಪೇಟೆ ಪೊಲೀಸರು, ಫಾರಂ ಮೇಲೆ ದಾಳಿ ನಡೆಸಿದ್ದು, ದಾಳಿ ವೇಳೆ ಕದ್ದ ಹಸು, ಎಮ್ಮೆಗಳು ಪತ್ತೆಯಾಗಿವೆ. ಜಾನುವಾರುಗಳನ್ನು ಮಾಲೀಕರಿಗೆ ಒಪ್ಪಿಸಿದ್ದಾರೆ. ಪೊಲೀಸರ ಕಾರ್ಯವನ್ನು ನೊಂದಿದ್ದ ರೈತರು  ಶ್ಲಾಘಿಸಿದ್ದಾರೆ.

ಕೆ.ಆರ್.ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯು ರವೀಗೌಡ ಕಳ್ಳತನ ಮಾಡಿದ್ದು,  ಸಂಬಂಧ ಕೆ.ಆರ್.ಪೇಟೆ ಪೊಲೀಸರು ರವೀಗೌಡನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಹಲವೆಡೆ ಕಳ್ಳತನ ಮಾಡಿದ್ದ ಬಗ್ಗೆ ಆರೋಪಿ ಬಾಯಿ ಬಿಟ್ಟಿದ್ದಾನೆ.

RELATED ARTICLES
- Advertisment -
Google search engine

Most Popular