ಗದಗ: ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದಲ್ಲಿ ವಿಚಿತ್ರ ಕರುವಿಗೆ ಎಮ್ಮೆ ಜನ್ಮ ನೀಡಿದ್ದು ಒಂದು ಮುಖ, ಎಂಟು ಕಾಲು, ಮೂರು ಕಿವಿ, ಇರುವಂತಹ ಅಪರೂಪದ ಕರು ನೋಡಲು ಜನರು ಆಗಮಿಸುತ್ತಿದ್ದಾರೆ. ಹಮ್ಮಿಗಿ ಗ್ರಾಮದ ಚಂದ್ರಪ್ಪ ಈಟಿ ಎನ್ನುವವರ ಎಮ್ಮೆ. ಎಮ್ಮೆ ಹೊಟ್ಟೆ ಯಲ್ಲಿ ಸಾವನ್ನಪ್ಪಿದ ವಿಚಿತ್ರ ಕರು . ಪಶು ವೈದ್ಯ ಡಾ. ಚನಬಸಯ್ಯ ಹಿರೇಮಠ ಹಾಗೂ ಕಿರಿಯ ಸಹಾಯಕ ರಮೇಶ ಗುಂಡಾಪೂರ ನೇತೃತ್ವದಲ್ಲಿ ಹೆರಿಗೆ ಮಾಡಿಸಲಾಯಿತು. ವೈದ್ಯರು ಹಾರ್ಮೋನ್ ವ್ಯತ್ಯಾಸದಿಂದ ಒಂದೊಂದು ಬಾರಿ ಇಂತಹ ಕರು ಜನಿಸುತ್ತದೆ ಎಂದಿದ್ದಾರೆ.