ಮೈಸೂರು: ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ೧೩೦ನೇ ವರ್ಷದ ಚಿಕಾಗೋ ಭಾಷಣದ ದಿನ ಅಂಗವಾಗಿ ದಿಗ್ವಿಜಯ್ ದಿವಸ್ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಉಡುಪಿ ಸಾಲಿಗ್ರಾಮದ ಸ್ವಾಮಿ ವಿವೇಕಾನಂದ ಡಿವೈನ್ ಪಾರ್ಕ್ ಡಿ.ಎಸ್.ಯಶ್ವಂತ್ ಸುಳ್ಯ ಮಾತನಾಡಿ, ವಿವೇಕಾನಂದರ ಜೀವನ ಚಿತ್ರಣ ಹಾಗೂ ವಿವೇಕಾನಂದರು ಏನು ಮಾಡುತ್ತಿದ್ದರು ಅವೆಲ್ಲವನ್ನೂ ದೇಶಕ್ಕೋಸ್ಕರ ಅರ್ಪಿಸುವ ಮನೋಭಾವ ಬೆಳೆಸಿಕೊಂಡಿದ್ದರು. ಹಾಗೆ ವಿದ್ಯಾರ್ಥಿಗಳು ವಿವೇಕಾನಂದರ ಭಾವನೆಗಳನ್ನು ಅರ್ಥ ಮಾಡಿಕೊಂಡು ಮುನ್ನಡೆಯಿರಿ ಎಂದು ಕರೆ ನೀಡಿದರು.
ಸ್ಪರ್ಧೆ ವಿಜೇತರು: ದಿಗ್ವಿಜಯ್ ದಿವಸದ ಅಂಗವಾಗಿ ಆಯೋಜಿಸಿದ್ದ ಅಂತರ ಪ್ರೌಢಶಾಲಾ ರಸಪ್ರಶ್ನೆ ಸ್ಪರ್ಧೆ ಹಾಗೂ ದೇಶ ಕಟ್ಟುವಲ್ಲಿ ಯುವಕರ ಪಾತ್ರ ಎಂಬ ವಿಷಯದ ಬಗ್ಗೆ ಚರ್ಚಾ ಸ್ಪರ್ಧೆಯಲ್ಲಿ ಸುಮಾರು ೩೦ ಪ್ರೌಢಶಾಲೆಗಳಿಂದ ೧೭೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಚರ್ಚಾ ಸ್ಪರ್ಧೆಯಲ್ಲಿ ಭಾರತೀಯ ವಿದ್ಯಾಭವನ್ ಶಾಲೆಯ ಪ್ರದ್ಯುಮ್ಮ ಭಟ್ಟ (ಪ್ರಥಮ), ಸೇಮಟ್ ಅರ್ನಾಲ್ಡ್ ಶಾಲೆಯ ರುಬೈನ ಅನಂ(ದ್ವಿತೀಯ), ರಾಮಕೃಷ್ಣ ವಿದ್ಯಾಶಾಲೆಯ ನರೇನ್ (ತೃತೀಯ) ಬಹುಮಾನ ಪಡೆದುಕೊಂಡರೆ, ಕನ್ನಡ ವಿಭಾಗದಲ್ಲಿ ರಾಮಕೃಷ್ಣ ವಿದ್ಯಾಶಾಲೆಯ ಮನಹಿತ್(ಪ್ರಥಮ), ಬಿವಿಬಿಯ ರಿತಿಶ (ದ್ವಿತೀಯ) ಬಹುಮಾನ ಪಡೆದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಮಕೃಷ್ಣ ವಿದ್ಯಾಶಾಲೆ (ಪ್ರಥಮ), ಭಾರತೀಯ ವಿದ್ಯಾಭವನ್ (ದ್ವಿತೀಯ), ನಿರ್ಮಲ ಆಂಗ್ಲ ಪ್ರೌಢಶಾಲೆ (ತೃತೀಯ) ಬಹುಮಾನ ಪಡೆದುಕೊಂಡಿತು. ಪರ್ಯಾಯ ನಿರಂತರ ಪಾರಿತೋಷಕವನ್ನು ರಾಮಕೃಷ್ಣ ವಿದ್ಯಾಶಾಲೆ ಪಡೆದುಕೊಂಡಿತು. ವಿಜೇತರಿಗೆ ಡಿ.ಎಸ್.ಯಶ್ವಂತ್ ಸುಳ್ಯ ಬಹುಮಾನ ವಿತರಿಸಿದರು. ಕಾಲೇಜಿನ ಪ್ರಾಂಶುಪಾಲೆ ಎನ್.ಅರ್ಚನ ಸ್ವಾಮಿ, ಉಪನ್ಯಾಸಕರು ಹಾಗೂ ಉಪನ್ಯಾಸಕೇತರರು ಇದ್ದರು.