Saturday, April 19, 2025
Google search engine

Homeಸ್ಥಳೀಯತಮಿಳುನಾಡಿಗೆ ಮತ್ತೆ ನೀರು ಬಿಡಲು ಆದೇಶ: CWRC ನಿರ್ಧಾರ ಅವಾಸ್ತವ ಅವೈಜ್ಞಾನಿಕವಾಗಿದೆ ಎಂದ ಬಡಗಲಪುರ ನಾಗೇಂದ್ರ

ತಮಿಳುನಾಡಿಗೆ ಮತ್ತೆ ನೀರು ಬಿಡಲು ಆದೇಶ: CWRC ನಿರ್ಧಾರ ಅವಾಸ್ತವ ಅವೈಜ್ಞಾನಿಕವಾಗಿದೆ ಎಂದ ಬಡಗಲಪುರ ನಾಗೇಂದ್ರ

ಮೈಸೂರು: ತಮಿಳುನಾಡಿಗೆ ಮತ್ತೆ 5000 ಕ್ಯೂಸೆಕ್ ನೀರು ಬಿಡುವಂತೆ CWRC ಸೂಚನೆ ನೀಡಿರುವ ಹಿನ್ನಲೆ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಒಪ್ಪಬಾರದು. ಈ ನಿರ್ಧಾರ ಅವಾಸ್ತವ ಅವೈಜ್ಞಾನಿಕವಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯ ಒತ್ತಾಯಿಸಿದ್ದಾರೆ.

ಕಾವೇರಿ ನಿರ್ವಹಣಾ ಸಮಿತಿ ಸೂಚನೆ ಸರಿಯಲ್ಲ. ಕಾವೇರಿ ನಿರ್ವಹಣಾ ಸಮಿತಿ ನಿರ್ಧಾರಕ್ಕೆ ರಾಜ್ಯ ರೈತ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ನಿರ್ಧಾರವನ್ನು ಖಂಡಿಸುತ್ತದೆ ಎಂದು ಹೇಳಿದರು.

ಸರ್ಕಾರ ಈ ಕೂಡಲೇ ಈ ನಿರ್ಧಾರವನ್ನು ವಿರೋಧಿಸಬೇಕು. ನೀರು ಬಿಡದೆ ಈ ನಿರ್ಧಾರದ ವಿರುದ್ಧ ಸುಪ್ರೀಕೋರ್ಟ್ ನಲ್ಲಿ ಅಪೀಲ್ ಮಾಡ್ಬೇಕು. ಸರ್ಕಾರ ರೈತರ ಹಿತ ಕಾಪಾಡದೆ ಇದ್ದರೆ ರೈತರು ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ಎಂದು  ಸರ್ಕಾರಕ್ಕೆ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular