ಹನೂರು : ಹಿಂದೂ ಮುಸ್ಲಿಂ ಸಮುದಾಯದ ಭಾವೈಕ್ಯ ಸಾರುವ ಗಂಧದ ಹಬ್ಬದ ಹಿನ್ನಲೆ ಹನೂರು ಪಟ್ಟಣದಲ್ಲಿ ಮೆರವಣಿಗೆ ನೆಡೆಯಿತು. ಹಲವು ವರ್ಷಗಳಿಂದಲೂ ಹನೂರು ಮುಸ್ಲೀಂ ಸಮುದಾಯದಿಂದ ಗಂಧ ತರುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಹನೂರಿನ ಮುಸ್ಲಿಂ ಸಮುದಾಯದ ಮುಖಂಡರು ಮತ್ತು ಭಕ್ತಾದಿಗಳು ಗಂಧ ತುಂಬಿದ ತುಂಬಿಗೆಯನ್ನು ಹೊತ್ತು ತಂದರು. ಹೂವಿನಿಂದ ಅಲಂಕೃತವಾದ ಬಿದಿರಿನ ತಡಿಕೆಯನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಯುವಕರು ಕುಣಿದು ಕುಪ್ಪಳಿಸಿದರು.