ಪಿರಿಯಾಪಟ್ಟಣ: ಹಿಟ್ನೇಹೆಬ್ಬಾಗಿಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿಗ ವಿನೋದ್ ಕುಮಾರ್ ಉಪಾಧ್ಯಕ್ಷರಾಗಿ ಈರೇಗೌಡ ಆಯ್ಕೆಯಾದರು.
ಸಂಘದ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿ ರವಿಕುಮಾರ್ ಆಯ್ಕೆ ಘೋಷಿಸಿದರು ಬಳಿಕ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಪಕ್ಷದ ವರಿಷ್ಠರ ಪರ ಜೈಕಾರ ಕೂಗಿ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸನ್ಮಾನಿಸಿ ಸಂಭ್ರಮಾಚರಿಸಿದರು.
ನೂತನ ಅಧ್ಯಕ್ಷ ವಿನೋದ್ ಕುಮಾರ್ ಅವರು ಮಾತನಾಡಿ ಶೇರುದಾರ ಸದಸ್ಯರಿಗೆ ಸಹಕಾರ ಸಂಘ ಮೂಲಕ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ನಿಗದಿತ ಸಮಯಕ್ಕೆ ತಲುಪಿಸಿ ಪಕ್ಷಾತೀತವಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿ ಅಧಿಕಾರಕ್ಕೆ ಬರಲು ಕಾರಣರಾದ ಮಾಜಿ ಶಾಸಕ ಕೆ.ಮಹದೇವ್ ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಮತ್ತು ಜೆಡಿಎಸ್ ಬೆಂಬಲಿಗರು ಮುಖಂಡರು ಶೇರುದಾರ ಸದಸ್ಯರು ಮತ್ತು ಗ್ರಾಮಸ್ಥರಿಗೆ ಧನ್ಯವಾದ ತಿಳಿಸಿದರು.
ಈ ಸಂದರ್ಭ ಉಪಾಧ್ಯಕ್ಷ ಈರೇಗೌಡ, ನಿರ್ದೇಶಕರಾದ ಕಗ್ಗುಂಡಿ ಹರೀಶ್, ಹೆಚ್.ಸಿ.ಮಹದೇವ್, ಹೆಚ್.ಎಸ್ ಕುಮಾರ್, ಚಂದ್ರ, ಈರೇಗೌಡ, ಕಾವೇರಮ್ಮ, ಹೆಚ್.ಡಿ ಮಹದೇವ್, ಮಹೇಶ್ ನಾಯ್ಕ, ಪಾರ್ವತಮ್ಮ, ಸಿಇಓ ಜಯರಾಮ್, ಸಿಬ್ಬಂದಿ ನಟರಾಜ್, ಸಂತೋಷ್, ಶ್ರೀನಿವಾಸ್, ಅಧ್ಯಕ್ಷರ ಸಹೋದರ ಎಚ್.ಎನ್ ಧ್ರುವರಾಜ್(ಮನು), ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಣ್ಣಯ್ಯ,
ಮುಖಂಡರಾದ ಶಂಕರ್, ಮಹದೇವ್, ಮುತ್ತೇಗೌಡ, ರವಿ, ಕೃಷ್ಣೆಗೌಡ, ದಶರಥ, ಪ್ರಕಾಶ್, ಯಲ್ಲಯ್ಯ, ನಾಗೇಂದ್ರ, ಸುರೇಶ್, ಪುಟ್ಟರಾಜು, ನಾಗೇಶ್, ಶಿವರಾಜು ಹಾಗೂ ಗ್ರಾಮದ ಯಜಮಾನರು ಮುಖಂಡರು ಇದ್ದರು.