ಮಂಡ್ಯ: ಸಕ್ಕರೆನಾಡಲ್ಲಿ ದರೋಡೆ ಮಾಡುತ್ತಿದ್ದ ಹೈಟೆಕ್ ಕಳ್ಳರನ್ನು ಕೆ.ಆರ್.ಪೇಟೆ ಟೌನ್ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ನಾಗಮಂಗಲ ತಾಲ್ಲೂಕಿನ ಚಾಕೇನಹಳ್ಳಿಯ ರವಿಕುಮಾರ್ (42), ಮಂಡ್ಯದ ಸೂನಗಹಳ್ಳಿಯ ಮಂಜುನಾಥ್(36), ವಿಷ್ಣು (31), ಹೇಮಂತ್ ಕುಮಾರ್ (30) ಬಂಧಿತ ಆರೋಪಿಗಳು.
ಚಾಕೇನಹಳ್ಳಿ ಗ್ರಾ.ಪಂ.ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಆರೋಪಿ ರವಿಕುಮಾರ್ ಹಾಗೂ ಪ್ರಮುಖ ಆರೋಪಿ ರವಿಕುಮಾರ್ ಗೆ ಮಾಜಿ ಗ್ರಾ.ಪಂ.ಉಪಾಧ್ಯಕ್ಷ ಮಂಜುನಾಥ್ ಸಹಾಯ ಮಾಡುತ್ತಿದ್ದ.

ಆ.17 ರಂದು ಕೆ.ಆರ್.ಪೇಟೆ ಪಟ್ಟಣದ ಜ್ಯುವೆಲರಿ ಶಾಪ್ ನಲ್ಲಿ ಆರೋಪಿಗಳು ಕಳ್ಳತನ ಮಾಡಿದ್ದರು.
ಜ್ಯೂವೆಲರಿ ಶಾಪ್, ವಾಹನ ಕಳ್ಳತನ, ಹಸು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು. ಕೆ.ಆರ್.ಪೇಟೆ ಠಾಣಾ ವ್ಯಾಪ್ತಿಯಲ್ಲಿ 4, ಮಂಡ್ಯ ಠಾಣಾ ವ್ಯಾಪ್ತಿಯಲ್ಲಿ 2, ಚನ್ನರಾಯಪಟ್ಟಣ, ಮೈಸೂರಿನ ಉದಯಗಿರಿ,ಬನ್ನೂರು, ಚನ್ನಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದೊಂದು ಪ್ರಕರಣ ಸೇರಿದಂತೆ 11 ಪ್ರಕರಣಗಳಲ್ಲಿ
ಡಿವೈಎಸ್ಪಿ ಲಕ್ಷ್ಮಿ ನಾರಾಯಣ್ ಪ್ರಸಾದ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು.
ಬಂಧಿತ ಆರೋಪಿಗಳಿಂದ 150 ಗ್ರಾಂ ತೂಕದ ಚಿನ್ನ, 20 ಕೆಜಿಯಷ್ಟು ಬೆಳ್ಳಿ ಸಾಮಾನು,1 ಟಾಟಾ ಎಸಿ ವಾಹನ, 1ಎರಿಟಿಕಾ ಕಾರು,1 ಬೈಕ್, ಲ್ಯಾಪ್ ಟ್ಯಾಪ್, 8 ಹಸುಗಳು, 1 ಸಿಲೆಂಡಿರ್, ವಾಟರ್ ಟ್ಯಾಂಕ್, ಗ್ಯಾಸ್ ಕಟರ್ ಹಾಗೂ 40 ಸಾವಿರ ನಗದು ಸೇರಿದಂತೆ 35.86 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಹಿಂದೆಯೂ ಶಾಲೆಗಳಲ್ಲಿ ಕಂಪ್ಯೂಟರ್ ಕಳ್ಳತನ ಸೇರಿ 18 ಪ್ರಕರಣಗಳಲ್ಲಿ ರವಿಕುಮಾರ್ ಭಾಗಿಯಾಗಿದ್ದಾನೆ.
ಸೆ.9 ರಂದು ನಾಗಮಂಗಲದ ಬೆಳ್ಳೂರು ಕ್ರಾಸ್ ನ ಉಮರ್ ನಗರದ ಬಳಿ ಆರೋಪಿಗಳ ಬಂಧಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೆ.ಆರ್.ಪೇಟೆ ಪೊಲೀಸರ ಕಾರ್ಯವನ್ನು ಎಸ್ ಪಿ ಎನ್.ಯತೀಶ್ ಶ್ಲಾಘಿಸಿದ್ದಾರೆ.