Wednesday, April 16, 2025
Google search engine

HomeUncategorizedರಾಷ್ಟ್ರೀಯಸಂಸತ್ ವಿಶೇಷ ಅಧಿವೇಶನ: ಕಡ್ಡಾಯವಾಗಿ ಹಾಜರಾಗುವಂತೆ ಸಂಸದರಿಗೆ ವಿಪ್​​ ಜಾರಿ ಮಾಡಿದ ಬಿಜೆಪಿ

ಸಂಸತ್ ವಿಶೇಷ ಅಧಿವೇಶನ: ಕಡ್ಡಾಯವಾಗಿ ಹಾಜರಾಗುವಂತೆ ಸಂಸದರಿಗೆ ವಿಪ್​​ ಜಾರಿ ಮಾಡಿದ ಬಿಜೆಪಿ

ದೆಹಲಿ: ಸೆಪ್ಟೆಂಬರ್ 18ರಿಂದ ಪ್ರಾರಂಭವಾಗುವ ಸಂಸತ್ ವಿಶೇಷ ಅಧಿವೇಶನಕ್ಕೆ ಬಿಜೆಪಿಯ ಎಲ್ಲ ಸಂಸದರು ಕಡ್ಡಾಯವಾಗಿ ಹಾಜರಾಗುವಂತೆ ಪಕ್ಷವು ವಿಪ್ ಜಾರಿ ಮಾಡಿದೆ.

ಐದು ದಿನಗಳ ಕಾಲ ನಡೆಯುವ ಸಂಸತ್ ವಿಶೇಷ  ಅಧಿವೇಶನಕ್ಕೆ ಸಕಾರಾತ್ಮಕವಾಗಿ ಹಾಜರಿರಬೇಕು ಎಂದು ಬಿಜೆಪಿ ತನ್ನ ಎಲ್ಲ ಸಂಸದರಿಗೆ ಮೂರು ಸಾಲಿನ ವಿಪ್​​ ಜಾರಿ ಮಾಡಿದೆ.

ಸೆ.18ರಿಂದ ಸೆ.22ವರೆಗೆ ನಡೆಯುವ ಅಧಿವೇಶನದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಜತೆಗೆ ಶಾಸಕಾಂಗ ವ್ಯವಹಾರಗಳನ್ನು ಹಾಗೂ ಕೆಲವೊಂದು ಮಸೂದೆಗಳನ್ನು ಅಂಗೀಕಾರಕ್ಕೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.

ಇನ್ನು ಈ ಅಧಿವೇಶದಲ್ಲಿ ಸಕಾರಾತ್ಮಕವಾಗಿ ಭಾಗವಹಿಸಿ ಸರ್ಕಾರದ ನಿಲುವನ್ನು ಬೆಂಬಲಿಸುವಂತೆ ವಿನಂತಿ ಮಾಡಲಾಗಿದೆ.

RELATED ARTICLES
- Advertisment -
Google search engine

Most Popular