Sunday, April 20, 2025
Google search engine

Homeರಾಜ್ಯಸುದ್ದಿಜಾಲದೇವಾಲಯದ ಜೀರ್ಣೋದ್ದಾರ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ:ಶಾಸಕ ಡಿ.ರವಿಶಂಕರ್ ಅಧಿಕಾರಿಗಳಿಗೆ ಸೂಚನೆ

ದೇವಾಲಯದ ಜೀರ್ಣೋದ್ದಾರ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ:ಶಾಸಕ ಡಿ.ರವಿಶಂಕರ್ ಅಧಿಕಾರಿಗಳಿಗೆ ಸೂಚನೆ

ಕೆ.ಆರ್.ನಗರ: ಹಳೆ ಎಡತೊರೆಯ ಮೀನಾಕ್ಷಿ ಸಮೇತ ಅರ್ಕೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ದಾರ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಶಾಸಕ ಡಿ.ರವಿಶಂಕರ್ ಅಧಿಕಾರಿಗಳಿಗೆ ಸೂಚಿಸಿದರು.
ದೇವಾಲಯದ ಆವರಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು ೨೦೧೯ರಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ದೇವಸ್ಥಾನದ ಜೀರ್ಣೋದ್ದಾರ ಮತ್ತು ಅಭಿವೃದ್ದಿಗಾಗಿ ೬ ಕೋಟಿ ರೂ ಮಂಜೂರಾಗಿದ್ದು ಕಾಮಗಾರಿಯನ್ನು ಪೂರ್ಣಗೊಳಿಸಿ ರಥೋತ್ಸವ ನಡೆಸಲು ಅನುಕೂಲ ಕಲ್ಪಿಸಬೇಕು ಎಂದು ತಾಕೀತು ಮಾಡಿದರು.
ದೇವಸ್ಥಾನದ ಕಟ್ಟಡದ ಪುನರ್ ನಿರ್ಮಾಣ ಅರ್ಧದಷ್ಟಾಗಿದ್ದು ಮುಂದುವರೆದ ಕಾಮಗಾರಿಗಾಗಿ ಬೇಕಾಗಿರುವ ೨ ಕೋಟಿ ರೂಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಡಲಾಗುತ್ತದೆ ಎಂದು ಭರವಸೆ ನೀಡಿದ ಶಾಸಕರು ಅಧಿಕಾರಿಗಳು ಸ್ಥಳದಲ್ಲಿದ್ದು ಕಾಮಗಾರಿಯನ್ನು ವೇಗವಾಗಿ ಮಾಡಿಸಬೇಕು ಎಂದು ಸಲಹೆ ನೀಡಿದರು.
ದೇವಾಲಯದ ಎಡಭಾಗದಲ್ಲಿ ಹರಿಯುತ್ತಿರುವ ಕಾವೇರಿ ನದಿಯ ಮಧ್ಯ ಭಾಗದಲ್ಲಿ ಈಶ್ವರ ದೇವರ ವಿಗ್ರಹ ಪ್ರತಿಷ್ಠಾಪಿಸಲು ಆಗಬೇಕಾಗಿರುವ ಕಾಮಗಾರಿಗಳನ್ನು ಮುಗಿಸಿ ೨೦೨೪ರ ಫೆಬ್ರವರಿ ಮಾಹೆಯಲ್ಲಿ ನಡೆಯುವ ರಥೋತ್ಸವದ ವೇಳೆಗೆ ವಿಗ್ರಹ ಲೋಕಾರ್ಪಣೆ ಮಾಡಲು ಸಿದ್ದತೆ ಮಾಡಿಕೊಳ್ಳಬೇಕು ಎಂದು ತಿಳಿಸಿದ ಶಾಸಕರು ಜಾತ್ರೆ ವೇಳೆಗೆ ದೇವಾಲಯಕ್ಕೆ ತಾತ್ಕಾಲಿಕವಾಗಿ ಸುಣ್ಣಬಣ್ಣ ಬಳಿಸಬೇಕು ಎಂದು ಹೇಳಿದರು.
ಮುಂದೆ ಮಂಜೂರಾಗುವ ಅನುದಾನದಿಂದ ದೇವಾಲಯದ ಹೊರ ಆವರಣದಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಶೌಚಾಲಯ, ಪಾರುಪತ್ತೆದಾರರು ಮತ್ತು ಅರ್ಚಕರ ವಿಶ್ರಾಂತಿ ಕೊಠಡಿ ನಿರ್ಮಾಣ ಮಾಡಿಸುವುದರ ಜತೆಗೆ ಶುದ್ದ ಕುಡಿಯುವ ನೀರಿನ ಘಟಕ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ ಶಾಸಕ ಡಿ.ರವಿಶಂಕರ್ ದೇವಸ್ಥಾನದ ಒಳ ಮತ್ತು ಹೊರ ಆವರಣಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ತಿಳಿಸಿದರು.
ಪಾರುಪತ್ತೆದಾರರು ಮತ್ತು ಅರ್ಚಕರು ಪರಸ್ಪರ ಹೊಂದಾಣಿಕೆಯಿoದ ಕೆಲಸ ಮಾಡುವುದರ ಜತೆಗೆ ಮುಜರಾಯಿ ಇಲಾಖೆಯ ಅಧಿಕಾರಿಗಳು ಮತ್ತು ತಹಶೀಲ್ದಾರ್‌ರವರ ಮಾರ್ಗದರ್ಶನ ಪಡೆದು ದೇವಸ್ಥಾನಕ್ಕೆ ಬರುವಂತಹಾ ಭಕ್ತರಿಗೆ ಯಾವುದೇ ರೀತಿ ತೊಂದರೆಯಾಗದoತೆ ಸೌಕರ್ಯ ಕಲ್ಪಿಸಬೇಕು ಹಬ್ಬ ಹರಿದಿನ ಸೇರಿದಂತೆ ವಿಶೇಷ ದಿನಗಳಲ್ಲಿ ಪೂರ್ಣದಿನ ದೇವಸ್ಥಾನದಲ್ಲಿ ಪೂಜಾ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ತಹಶೀಲ್ದಾರ್ ಸಿ.ಎಸ್.ಪೂರ್ಣಿಮ, ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಆರ್.ವಿನಯ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸುಮಿತ, ಇಂಜಿನಿಯರ್ ಜಿ.ಕೆ.ಪ್ರಸಾದ್, ಪ್ರವಾಸೋದ್ಯಮ ಇಲಾಖೆಯ ಸತೀಶ್, ಮುಜರಾಯಿ ಇಲಾಖೆ ಅಸ್ಲಂಪಾಷ, ಚೆಸ್ಕಂ ಎಇಇ ಅರ್ಕೇಶ್ವರಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸೈಯದ್‌ಜಾಬೀರ್, ಮುಖಂಡರಾದ ವೈ.ಎಸ್.ಕುಮಾರ್, ಹಾಡ್ಯಮಹದೇವಸ್ವಾಮಿ, ಕಲ್ಲಹಳ್ಳಿಶ್ರೀನಿವಾಸ್, ತಿಪ್ಪೂರುನಾಗೇಗೌಡ, ತಿಮ್ಮಶೆಟ್ಟಿ, ಪ್ರಕಾಶ್, ಲೋಕೇಶ್, ಜಗದೀಶ್, ಯಶವಂತ್ ಇದ್ದರು

RELATED ARTICLES
- Advertisment -
Google search engine

Most Popular