Sunday, April 20, 2025
Google search engine

Homeರಾಜ್ಯಸುದ್ದಿಜಾಲಸಮಸ್ಯೆಗಳಿಗೆಆತ್ಮಹತ್ಯೆಒಂದೇದಾರಿಯಲ್ಲ:ವಿಜಯಕುಮಾರಿ

ಸಮಸ್ಯೆಗಳಿಗೆಆತ್ಮಹತ್ಯೆಒಂದೇದಾರಿಯಲ್ಲ:ವಿಜಯಕುಮಾರಿ

ರಾಮನಗರ : ಜೀವನದಲ್ಲಿ ಸಾಧನೆಯನ್ನು ಮಾಡುವ ಮೂಲಕ ನಿಮ್ಮ ತಂದೆ, ತಾಯಿ ಹಾಗೂ ಗುರುಗಳಿಗೆ ಗೌರವವನ್ನು ತಂದುಕೊಡಿ ಎಂದು ನಗರಸಭೆ ಅಧ್ಯಕ್ಷರಾದ ವಿಜಯ ಕುಮಾರಿ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ವತಿಯಿಂದ ರಾಮನಗರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವ್ಯಕ್ತಿಗಳು ತಮಗಿರುವ ಸಮ್ಯಸೆಗಳಿಂದ ಹೊರಬರಲು ಸಾಧ್ಯವೇ ಇಲ್ಲ ಎಂದು ಅನೇಕ ಜನರು ತಪ್ಪುತಿಳುವಳಿಕೆಯನ್ನು ಹೊಂದಿರುತ್ತಾರೆ ಇತ್ತೀಚೆಗೆ ಅತಿಯಾದ ಒಂಟಿತನ, ಮಾನಸಿಕ ಕಾಯಿಲೆಗಳು, ಮಾದಕ ವಸ್ತುಗಳನ್ನು ಅತಿಯಾಗಿ ಬಳಕೆ, ಹೆಚ್ಚಿನ ಒತ್ತಡ, ಆರ್ಥಿಕ ನಷ್ಟಗಳನ್ನು ಎದುರಿಸುವ ಧೈರ್ಯವನ್ನು ಹೊಂದುವ ಮೂಲಕ ಜೀವನದಲ್ಲಿ ಸಾಧನೆಯನ್ನು ಮಾಡಬೇಕು. ಮನುಷ್ಯರಿಗೆ ಸಿಗುವುದು ಕೇವಲ ಒಂದು ಜೀವನ ಅದನ್ನು ಆತ್ಮಹತ್ಯೆ ಮೂಲಕ ಕೋನೆಗಳಿಸಬೇಡಿ, ಎಲ್ಲಾ ಸಮಸ್ಯೆಗಳಿಗೂ ಆತ್ಮಹತ್ಯೆ ಒಂದೆ ದಾರಿಯಾಗಿರುವುದಿಲ್ಲ ಎಂದು ತಿಳಿಸಿದರು.

ನಗರಸಭೆ ಉಪಾಧ್ಯಕ್ಷರಾದ ಸೋಮಶೇಖರ್ (ಮಣಿ) ಅವರು ಮಾತನಾಡಿ, ನಮ್ಮಲ್ಲಿ ಹೆಚ್ಚಾಗಿ ಯುವಜನಾಂಗ ಆತ್ಮಹತ್ಯೆ ಮಾಡಿಕೊಂಡು ತಮ್ಮ ಅಮೂಲ್ಯವಾದ ಪ್ರಾಣವನ್ನು ಕಳೆದು ಕೊಳುತ್ತಿದ್ದಾರೆ. ಯಾರೇ ಆದರು ಆತ್ಮಹತ್ಯೆ ಮಾಡಿಕೊಳುವ ಮೊದಲು ನಿಮಗೆ ಜನ್ಮ ಕೊಟ್ಟ ತಂದೆ ತಾಯಿಯನ್ನು ನೆನಪು ಮಾಡಿಕೊಳ್ಳಿ ಯಾವುದೇ ರೀತಿಯ ಮಾದಕ ವಸ್ತುಗಳಿಗೆ ದಾಸರಾಗಬೇಡಿ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಕುಟುಂಬ ಮತ್ತು ಕಲ್ಯಾಣ ಅಧಿಕಾರಿ ಡಾ. ಕಾಂತರಾಜು ಅವರು ಮಾತನಾಡಿ, ಮನುಷ್ಯ ಕೇವಲ ದೈಹಿಕವಾಗಿ ಅಲ್ಲದೆ ಮಾನಸಿಕವಾಗಿಯೂ ಆರೋಗ್ಯವಾಗಿರಬೇಕು ಯಾವುದೇ ಕಾರಣಕ್ಕೂ ಮಾನಸಿಕವಾಗಿ ಕೊರಗಬೇಡಿ, ಜೀವನದಲ್ಲಿ ಬರುವ ಎಲ್ಲಾ ತೊಂದರೆಗಳನ್ನು ಧೈರ್ಯದಿಂದ ಎದುರಿಸಿ ಯಾವುದೆ ಕಾರಣಕ್ಕೂ ಭಯ ಪಡಬೇಡಿ ಎಲ್ಲಾ ಸಮಸ್ಯೆಗಳಿಗೊ ಪರಿಹಾರವಿದೆ ಆದರ್ಶ ವ್ಯಕ್ತಿಗಳ ಪುಸ್ತಕಗಳನ್ನು ಓದಿ ಅವರು ನಡೆದುಕೊಂಡು ಬಂದ ದಾರಿಯಲ್ಲಿ ನೀವುಗಳು ಸಹ ಮುಂದೆ ಬನ್ನಿ ಜೀವನ ಸಿಗುವುದು ಒಂದು ಬಾರಿ ಮಾತ್ರ ಅದನ್ನು ಯಶಸ್ವಿಯಾಗಿ ಪೂರೈಸಿ ಎಂದು ತಿಳಿಸಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಮನೋರೋಗ ತಜ್ಞರಾದ  ಡಾ. ಆದರ್ಶ ಅವರು ಮಾತನಾಡಿ, ನ್ಯಾಷ್‌ನಲ್ ಕ್ರೆöÊಂ ರೆಕಾರ್ಡ್ ಆಫ್ ಬ್ಯೂರೊ  2021 ರ ಗಣತಿ ಪ್ರಕಾರ ಪ್ರಪಂಚದಲ್ಲಿ 1,64,033 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುವುದರಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿದೆ. ಸಾಮಾನ್ಯವಾಗಿ ಜನರು ಅತಿಯಾದ ಸಾಲ, ಪ್ರೀತಿ, ಮಾನಸಿಕ ಆರೋಗ್ಯ sಸಮಸ್ಯೆ, ಪರೀಕ್ಷೆಯಲ್ಲಿ ಅನುತ್ತೀರ್ಣ, ಮದ್ಯಪಾನ ಮತ್ತು ಮಾದಕ ವಸ್ತುಗಳ ಬಳಕೆ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಕುಗ್ಗುವಿಕೆ ಮತ್ತು ಒಂಟಿತನದ ಭಾವನೆ, ಖಿನ್ನತೆಯಿಂದ ಬಳಲುತ್ತಿರುವ ಆತ್ಮಹತ್ಯೆಯ ಆಲೋಚನೆಯು ಸಾಮಾನ್ಯರಿಗಿಂತ 20 ಪಟ್ಟು ಹೆಚ್ಚಿರುತ್ತದೆ. ನಾವುಗಳು ಅಂತವರನ್ನು ಗುರುತಿಸಿ ಸರಿಯಾದ ಮಾರ್ಗದರ್ಶನವನ್ನು ನೀಡಬೇಕು. ಆತ್ಯಹತ್ಯೆ ಮಾಡಿಕೊಳ್ಳುತ್ತಿರುವವರು ಕಂಡು ಬಂದರೆ ರಾಮನಗರ ಜಿಲ್ಲಾ ಮಾನಸಿಕ ಆರೋಗ್ಯ ಸಹಯವಾಣಿ-8050076646 ಗೆ ಕರೆ ಮಾಡಿ ಆತ್ಮಹತ್ಯೆಯನ್ನು ತಡೆಗಟ್ಟಿ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಸಪ್ತಾಹದ ಭಿತ್ತಿ ಪತ್ರ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಸಿ. ಮಂಜುನಾಥ್, ಆರ್.ಸಿ.ಹೆಚ್ ಅಧಿಕಾರಿ ಡಾ. ರಾಜು, ಮಾನಸಿಕ ಆರೋಗ್ಯ ವಿಭಾಗದ ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತರಾದ ಪದ್ಮರೇಖಾ, ಅರೆ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular