ಮಂಡ್ಯ: ಸೇವಂತಿ ಹೂವಿನ ದರ ಕುಸಿತವಾದ ಹಿನ್ನಲೆ ನೊಂದ ರೈತ ಸೇವಂತಿ ಹೂವಿನ ಸಸಿಗಳನ್ನು ನಾಶ ಮಾಡಿರುವ ಘಟನೆ ಪಾಂಡವಪುರ ತಾಲೂಕಿನ ಬೆಳ್ಳಾಳೆ ಗ್ರಾಮದಲ್ಲಿ ನಡೆದಿದೆ.
ಅಭಿಷೇಕ್ ಎಂಬ ರೈತ 1 ಎಕರೆ ಪ್ರದೇಶದಲ್ಲಿ ಸೇವಂತಿ ಹೂ ಬೆಳೆದಿದ್ದ. ಹೂವಿನ ಬೆಲೆ ಇಳಿಕೆಯಾದ್ದರಿಂದ ಕೃಷಿಗೆ ಮಾಡಿದ ಹಣ ಕೂಡ ಬರುವುದಿಲ್ಲವೆಂದು ಟ್ರ್ಯಾಕ್ಟರ್ ನಿಂದ ಜಮೀನನ್ನು ಉಳುಮೆ ಮಾಡುವ ಮೂಲಕ ಹೂವಿನ ಗಿಡಗಳನ್ನು ನಾಶ ಮಾಡಿದ್ದಾನೆ.
ಹೂ ಕೊಳ್ಳದ ಕಾರಣಕ್ಕೆ ಕೆಲವು ರೈತರು ಹೂವನ್ನು ನದಿಗೆ ಎಸೆದು ಬರಿಗೈಲಿ ವಾಪಸ್ಸಾಗಿದ್ದಾರೆ.
ಪಾಂಡವಪುರ ಹಾಗೂ ಕೆ.ಆರ್.ಪೇಟೆಯಲ್ಲಿ ಹೆಚ್ಚಿನ ರೈತರು ಸೇವಂತಿ ಹೂವಿನ ಕೃಷಿ ಮಾಡಿದ್ದು, ಇದೀಗ ಹೂವಿನ ದರ ಕುಸಿತದಿಂದ ಈ ಭಾಗದ ರೈತರು ಕಂಗಾಲಾಗಿದ್ದಾರೆ.