Monday, April 21, 2025
Google search engine

Homeರಾಜ್ಯಶ್ರೀರಾಂಪುರ: ಮೂಕಾಂಬಿಕಾ ಸಮೃದ್ಧಿ ಬಡಾವಣೆಯಲ್ಲಿ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ

ಶ್ರೀರಾಂಪುರ: ಮೂಕಾಂಬಿಕಾ ಸಮೃದ್ಧಿ ಬಡಾವಣೆಯಲ್ಲಿ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ

ಶ್ರೀರಾಂಪುರ: ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಾದ ಶ್ರೀಧರ್ ರವರ ಮಾರ್ಗದರ್ಶನದಲ್ಲಿ ಮೂಕಾಂಬಿಕಾ ಸಮೃದ್ಧಿ ಬಡಾವಣೆಯ ನಿವಾಸಿಗಳ ಹಿತರಕ್ಷಣ ಸಮಿತಿ (ರಿ) ಯು ಬಡಾವಣೆಯ ನಿವಾಸಿಗಳಿಗೆ ಸಂವಿಧಾನದ ಮಹತ್ವ ತಿಳಿಸುವ ಕಾರ್ಯಕ್ರಮವನ್ನು ಶ್ರೀರಾಂಪುರ ಪಟ್ಟಣ ಪಂಚಾಯಿತಿಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿಯ ಕಂದಾಯ ಅಧಿಕಾರಿ ಕುಮಾರ್ ರವರು ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಬಡಾವಣೆಯ ಎಲ್ಲಾ ನಿವಾಸಿಗಳ ಬಳಿ ಸಂವಿಧಾನಾತ್ಮಕವಾಗಿ ಇರುವುದಾಗಿ ಪ್ರತಿಜ್ಞೆ ಮಾಡಿಸಿದರು.

ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಾದ ಶ್ರೀಧರ್ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಭಾರತದಲ್ಲಿ ಪ್ರಜೆಗಳಾದ ನಾವು ಸ್ವಾತಂತ್ರ್ಯವಾಗಿ ಬದುಕಲು, ದುಡಿಯಲು, ಸಂಪಾದಿಸಲು, ಸಾರ್ವಜನಿಕವಾಗಿ ಜೀವಿಸಲು ನಮಗೆ ಆಧಾರವೆ ಸಂವಿಧಾನ. ಭಾರತದ ಸಂವಿಧಾನ ನಮಗೆ ಕೇವಲ ಕಾನೂನುಗಳ ಪುಸ್ತಕ ಮಾತ್ರವಲ್ಲ ಅದೊಂದು ನಮ್ಮ ಜೀವನ ಶೈಲಿಯ ಗ್ರಂಥ. ಭಾರತ ದೇಶದಲ್ಲಿ ವಾಸಿಸುವ ನಾವೆಲ್ಲರೂ ಸಂವಿಧಾನಕ್ಕೆ ಅತ್ಯಂತ ಗೌರವವನ್ನು ನೀಡಬೇಕು ಎಂದರು.

ಆಳುವ ಸರ್ಕಾರದಿಂದ ಹಿಡಿದು ನ್ಯಾಯಾಲಯ ಸೇರಿದಂತೆ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸಮಾನವಾದ ಶ್ರೇಷ್ಠ ಪುಸ್ತಕವಿದೆ ಅಂದರೆ ಅದು ನಮ್ಮ ಸಂವಿಧಾನ. ನಮ್ಮ ಸಂವಿಧಾನವನ್ನು ಅತ್ಯಂತ ಹೆಚ್ಚು ಅಧ್ಯಯನ ಮಾಡಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳ ಹಿತರಕ್ಷಣ ಸಮಿತಿಯ ಅಧ್ಯಕ್ಷರಾದ ಕೆ.ಆರ್.ಗಣೇಶ್ ಮಾತನಾಡಿ, ನಮ್ಮ ಬಡಾವಣೆಯಲ್ಲಿ ನಾವೆಲ್ಲರೂ ಯಾವುದೇ ಬೇಧ ಭಾವವಿಲ್ಲದೆ ಅತ್ಯಂತ ಅನ್ಯೋನ್ಯವಾಗಿ ವಾಸಿಸುತ್ತಿದ್ದೇವೆ ಇದೇ ಸಂವಿಧಾನದ ಆಶಾಯವೂ ಆಗಿದೆ. ಸಂವಿಧಾನದಂತೆ ಬದುಕಿದಾಗ ಮಾತ್ರ ಸರ್ವ ಸಮಾನವಾದ ಸಮಾಜ ನಿರ್ಮಾಣ ಸಾಧ್ಯ ಹಾಗೂ ನಮ್ಮ ಬಡಾವಣೆಯಲ್ಲಿ ಸಂವಿಧಾನದ ಆಶಯದಂತೆ ಸಮಾನತೆ, ಸ್ವಾತಂತ್ರ್ಯ ಹಾಗೂ ಭ್ರಾತೃತ್ವ ಸೌಹಾರ್ದತೆಯಿಂದ ನಾವು ಬದುಕುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂವಹನಾಧಿಕಾರಿ ಶ್ರೀನಿವಾಸ್, ಆರೋಗ್ಯಾಧಿಕಾರಿ ಪರಮೇಶ್ವರ್, ಕಂದಾಯ ಅಧಿಕಾರಿ ಕುಮಾರ್, ಜಲ ನಿರ್ವಹಣಾ ವ್ಯವಸ್ಥಾಪಕ ಪರಮೇಶ್, ಜಲ ಗಂಟಿ ಶ್ರೀನಿವಾಸ್, ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳ ಹಿತರಕ್ಷಣ ಸಮಿತಿಯ ಅಧ್ಯಕ್ಷರಾದ ಗಣೇಶ್, ಉಪಾಧ್ಯಕ್ಷ ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಪುನೀತ್, ನಿರ್ದೇಶಕರಾದ ಮಹೇಶಪ್ಪ ಪಿ ಟಿ, ಶೈಲಜಾ, ಶೈಲಶ್ರೀ, ಬಿ.ಕೆ. ಮುರುಡಿ, ತೇಜಸ್ , ನಿರ್ಮಲ, ಯಶ್ವಂತ್, ಉಮಾ ಪುಟ್ಟರಾಜು , ಮಂಜುಳಾ, ನೀತು, ಕಿರಣ್, ಮಹೇಶ್ , ಮೋಹನ್ ಸೇರಿದಂತೆ ಬಡಾವಣೆಯ ನಿವಾಸಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular