Sunday, April 20, 2025
Google search engine

Homeರಾಜ್ಯಮನೆ ಕಳ್ಳತನ: ಪೊಲೀಸರಿಗೆ ಬಂದ ವಿಚಿತ್ರ ದೂರು.!

ಮನೆ ಕಳ್ಳತನ: ಪೊಲೀಸರಿಗೆ ಬಂದ ವಿಚಿತ್ರ ದೂರು.!

ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲೊಂದು ವಿಚಿತ್ರ ದೂರು ಪ್ರಕರಣ ಬೆಳಕಿಗೆ ಬಂದಿದೆ. ಬೆಲೆಬಾಳುವ ವಸ್ತುಗಳು ಕಳವು ಆಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡುವುದು ಸಹಜ. ಆದರೆ ಇಲ್ಲೊಬ್ಬ ಮನೆ ಕಳವಾಗಿದೆ ಎಂದು ಪೊಲೀಸರಿಗೆ ದೂರು‌ ಕೊಟ್ಟಿದ್ದಾನೆ.

ಹಳೆ ಬೂದನೂರು ಗ್ರಾಮದಲ್ಲಿ ಮಾವನ ಮನೆ ಕಳುವಾಗಿದೆ ಎಂದು  ಸ್ವಂತಮನೆ ನಮ್ಮಹಕ್ಕು ಹೋರಾಟ ಸಮಿತಿ ಸಂಚಾಲಕ ಬಿ.ಕೆ.ಸತೀಶ್ ಎಸ್ ಪಿ ಕಚೇರಿಯಲ್ಲಿ ಎಎಸ್.ಪಿ ತಿಮ್ಮಯ್ಯ ಅವರಿಗೆ ದೂರು ನೀಡಿದ್ದಾರೆ.

ಬೂದನೂರು ಗ್ರಾ.ಪಂ. ಖಾತೆ ಸಂಖ್ಯೆ  291/288 ರಲ್ಲಿ ಬಿ.ಟಿ.ಸಿದ್ದರಾಮಯ್ಯ ಬಿನ್ ತಮ್ಮೇಗೌಡ ಅವರ ಮನೆ ಇತ್ತು. ಅವರು ಮನೆಗೆ ಹೋಗಿ ನೋಡಿದಾಗ ಮನೆ ಇರಲಿಲ್ಲ. ಗ್ರಾಮ ಪಂಚಾಯತಿಗೆ ತೆರಳಿ ವಿಚಾರಿಸಿ ದಾಖಲೆ ಕೇಳಿದಾಗ ಅದರಲ್ಲಿ ಮನೆ ಇದೆ ಎಂದು ದಾಖಲೆ ನೀಡಿದ್ದಾರೆ. ಮನೆ ಇಲ್ಲದ ಬಗ್ಗೆ ವಿಚಾರಿಸಿದಾಗ ವಾಸ್ತವವಾಗಿ ಮನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆಗೆ ಮನೆ ತೆರವುಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಮನೆಯನ್ನು ಮಕ್ಕಳಿಲ್ಲದೆ ಮಾವ ನನಗೆ ಉಡುಗೊರೆ ಕೊಡುತ್ತೇನೆ ಎಂದಿದ್ದರು. ಇದೀಗ ಮಾವ ಅಮೆರಿಕಾಕ್ಕೆ ಹೋಗಿ ನೆಲೆಸಿದ್ದಾರೆ ದೂರವಾಣಿ ಸಂಪರ್ಕ ಸಿಗುತ್ತಿಲ್ಲ. ಗ್ರಾಮ ಪಂಚಾಯತಿ ಮನೆ ತೆರವುಗೊಳಿಸಿದ್ದರೂ ದಾಖಲೆ ಇಟ್ಟಿದ್ದಾರೆ.

ಈ ಕುರಿತು ಮಾಹಿತಿ ಕೇಳಿದಾಗ ಇಲ್ಲ ಎಂದು ಮೌಖಿಕ ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಭೂಸ್ವಾಧೀನ ಅಧಿಕಾರಿ ಹಾಗೂ ಗ್ರಾ.ಪಂ. ಪಿಡಿಒ ಈ ಕೃತ್ಯಕ್ಕೆ ಕಾರಣವಾಗಿದ್ದು, ಮನೆ ಕಳವು ಮಾಡಿರುವ ಬಗ್ಗೆ ಏನು ಕ್ರಮ ವಹಿಸಿದ್ದಾರೆ ಎಂದು ತನಿಖೆ ನಡೆಸಿ ನಮಗೆ ನ್ಯಾಯಕೊಡಿಸಿ ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

RELATED ARTICLES
- Advertisment -
Google search engine

Most Popular