Saturday, April 19, 2025
Google search engine

Homeರಾಜ್ಯಸುದ್ದಿಜಾಲಜಿಲ್ಲಾಡಳಿತ ರೈತರ ಕಷ್ಟಗಳಿಗೆ ಸ್ಪಂದಿಸಲಿದೆ: ಶಿವಾನಂದ ಮೂರ್ತಿ

ಜಿಲ್ಲಾಡಳಿತ ರೈತರ ಕಷ್ಟಗಳಿಗೆ ಸ್ಪಂದಿಸಲಿದೆ: ಶಿವಾನಂದ ಮೂರ್ತಿ

ರಾಮನಗರ: ಜಿಲ್ಲೆಯ ರೈತರು ಎದುರುಸುತ್ತಿರುವ ಕಷ್ಟಗಳಿಗೆ ಜಿಲ್ಲಾಡಳಿತವು ಸ್ಪಂದಿಸಲಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದ ಮೂರ್ತಿ ಅವರು ತಿಳಿಸಿದರು. ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ರೈತರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೈತರು ಕಂದಾಯ, ಅರಣ್ಯ, ಕೃಷಿ, ತೋಟಗಾರಿಕೆ, ಪಶುಪಾಲನೆ, ಸಹಕಾರ ಇಲಾಖೆಯಲ್ಲಿ ಹೆಚ್ಚು ಸಮಸ್ಯೆಗಳನ್ನು ಎದುರುಸುತ್ತಿದ್ದು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು, ಇಂದು ಸಭೆಯಲ್ಲಿ ತಿಳಿಸಿರುವ ರೈತರ ಬೇಡಿಕೆಗಳ ಬಗ್ಗೆ ರೈತರ ಕೈ ಹಿಡಿಯುವ ಕೆಲಸಗಳನ್ನು ಮಾಡಲಾಗುವುದು ತಮ್ಮ ಸಮಸ್ಯೆಗಳನ್ನು ಸಂಬಂಧ ಪಟ್ಟ ಇಲಾಖೆಗೆ ವರ್ಗಾಯಿಸಿ, ಸಂಬಂಧ ಪಟ್ಟ ಅಧಿಕಾರಿಗಳು ಕ್ರಮವಹಿಸಿದ ಬಗ್ಗೆ ರೈತರಿಗೆ ಮಾಹಿತಿಯನ್ನು ನೀಡಲಿದ್ದಾರೆ ಎಂದು ತಿಳಿಸಿದರು.

ರೈತ ಸಂಘದ ಭೈರೇಗೌಡ ಅವರು ಮಾತನಾಡಿ, ರೈತರು ಬೆಳೆ ಬೆಳೆಯುವುದನ್ನು ತಂತ್ರಾಂಶದಲ್ಲಿ ಅಧಿಕಾರಿಗಳು ಅಳವಡಿಸುತ್ತಿಲ್ಲ ಹಳ್ಳಿಗಳಲ್ಲಿ ಸರಿಯಾದ ಇಂಟರ್ ನೆಟ್ ಸೌಲಭ್ಯ ಮತ್ತು ತಂತ್ರಾಂಶಕ್ಕೆ ಪೂಕರವಾದ ಮೊಬೈಲ್‌ಗಳು ರೈತರ ಬಳಿ ಇರುವುದಿಲ್ಲ ಆದುದರಿಂದ ಬೆಳೆಗಳ ವಿವರಗಳನ್ನು ಅಧಿಕಾರಿಗಳೆ ಮಾಡುವಂತೆ, ಕೃಷಿ ಇಲಾಖೆಯಿಂದ ನೀಡಿರುವಂತಹ ಪರಿಕರಿಗಳು ಗುಣಮಟ್ಟದಲ್ಲಿ ಇರುವುದಿಲ್ಲ, ಬೆಳೆ ಸಾಲವನ್ನು ಒಂದು ಲಕ್ಷದಿಂದ ಐದು ಲಕ್ಷಗಳಿಗೆ ಹೆಚ್ಚಿಸುವಂತೆ ಸಭೆಗೆ ತಿಳಿಸಿದರು.

ರೈತ ಸಂಘದ ಪುಟ್ಟಸ್ವಾಮಿ ಅವರು ಮಾತನಾಡಿ, ರೈತರಿಗೆ ರಸಗೊಬ್ಬರ ಸಿಗುತ್ತಿಲ್ಲ, ಕಳಪೆ ರಸಗೊಬ್ಬರ ಮಾರಾಟ ಮಾಡಿ ರೈತರ ಆರ್ಥಿಕ ಜೀವನವನ್ನು ಹಾಳು ಮಾಡುತ್ತಿದ್ದಾರೆ. ರಸಗೊಬ್ಬರ ಅಂಗಡಿಗಳ ಮುಂದೆ ದರಪಟ್ಟಿಯನ್ನು ನಮೂದಿಸಿರುವುದಿಲ್ಲ ಎಲ್ಲಾ ಅಂಗಡಿಗಳ ಮುಂದೆ ದರಪಟ್ಟಿಯನ್ನು ಕಡ್ಡಾಯವಾಗಿ ನಮೂದಿಸಬೇಕು, ಸಿರಿಧಾನ್ಯಕ್ಕೆ ಹೆಚ್ಚು ಒತ್ತು ಕೊಟ್ಟರೆ ರೈತರು ಆರ್ಥಿಕ ಸಂಕಷ್ಟದಿಂದ ಹೊರಬರಬಹುದು, ರಾಗಿ ಖರೀದಿ ಕೇಂದ್ರ ಪುನಃ ಸ್ಥಾಪಿಸಿ ರಾಗಿಯನ್ನು ರೈತರಿಂದ ಖರೀದಿಸಲು ಕ್ರಮವಹಿಸಬೇಕು. ಪಹಣಿಯಲ್ಲಿ ರೈತರು ಬೆಳೆದ ಬೆಳೆಗಳ ಬಗ್ಗೆ ಮಾಹಿತಿ ಇರುವುದಿಲ್ಲ ಜಿಲ್ಲೆಯಲ್ಲಿ ಮಾವು ಮತ್ತು ತೆಂಗು ಬೆಳೆ ಪುನಶ್ಚೇತನವಾಗಬೇಕು ಎಂದರು.

ಪಶುಸಂಗೋಪನಾ ಇಲಾಖೆಯ ಐದು ಅಂಬುಲೆನ್ಸ್‌ಗಳನ್ನು ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸಲು ಕ್ರಮವಹಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು. ರೈತ ಸಂಘದ ಚಂದ್ರಶೇಖರ್ ರವರು ಮಾತನಾಡಿ, ಬೆಳೆ ಮೇಲೆ ಸಾಲ ಪಡೆದಿರುವ ಮೇಲೆ ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ. ಬ್ಯಾಂಕ್ ನವರು ಸಾಲಗಾರರ ಸಭೆ ನಡೆಸಬೇಕು, ಅಗತ್ಯವಿರುವ ಕಡೆ ಟ್ರಾನ್ಸ್‌ಫಾರ್‍ಮ್‌ರ್ ಅಳವಡಿಸಲು ಬೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದರು.

ರೈತಸಂಘದ ಪುಟ್ಟಸ್ವಾಮಿ ರವರು ಮಾತನಾಡಿ, ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿತ್ತು ಆದರೆ ಎನು ಕಾರ್ಯ ಆಗಿಲ್ಲ. ರೈತರ ಭಾವನೆಗಳಿಗೆ ಜಿಲ್ಲಾಡಳಿತ ಸ್ಪಂದಿಸಬೇಕು, ಕೆಲ ಹಾಲು ಉತ್ಪಾದಕರ ಸಂಘಗಳಲ್ಲಿ ಪ್ರೋತ್ಸಾಹಧನ ವಿತರಣೆ ಮಾಡುತ್ತಿಲ್ಲ ಅಂತಹ ಸಂಘಗಳ ವಿರುದ್ದ ಕ್ರಮಕೈಗೊಳ್ಳಬೇಕು ಜಿಲ್ಲೆಯಲ್ಲಿ ನೀರ ಮಾರಾಟಕ್ಕೆ ಪ್ರೋತ್ಸಾಹ ನೀಡಬೇಕು ಆಗ ರೈತರು ಆರ್ಥಿಕವಾಗಿ ಅಭಿವೃದ್ಧಿಹೊಂದುತ್ತಾರೆ. ಆನೆಗಳ ದಾಳಿ ಆಗುತ್ತಿದೆ ಇವುಗಳನ್ನು ತಡೆಯಲು ಕ್ರಮವಹಿಸಬೇಕು ಎಂದರು. ಅಲ್ಲದೆ ತೋಟಗಾರಿಕೆ ಇಲಾಖೆಯಿಂದ ದೇಸಿ ತಳಿ ಕಿಟ್ ವಿತರಿಸಲು ಕ್ರಮವಹಿಸಬೇಕು ಎಂದರು.
ಕುಮಾರಸ್ವಾಮಿ ರವರು ಮಾತನಾಡಿ, ಜಿಲ್ಲೆಯಲ್ಲಿ ಗಣಿಕಾರಿಕೆಗೆ ಕಡಿವಾಣ ಹಾಕಬೇಕು ಇದರಿಂದ ಪರಿಸರ ನಾಶವಾಗುತ್ತಿದೆ, ಜಿಲ್ಲೆಯಲ್ಲಿ ಸಾಕಷ್ಟು ಶಿಕ್ಷಕರ ಕೊರತೆ ಇದೆ, ಶಿಕ್ಷಕರನ್ನು ಭರ್ತಿ ಮಾಡಲು ಕ್ರಮವಹಿಸಬೇಕು ಎಂದರು.

ಉಪವಿಭಾಗಧಿಕಾರಿ ಬಿನೋಯ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್, ಅರಣ್ಯ ಇಲಾಖೆ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ, ತಹಶೀಲ್ದಾರ್ ಸುರೇಂದ್ರ, ಸ್ಮಿತಾ, ತೇಜಸ್ವಿನಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular