ಪಿರಿಯಾಪಟ್ಟಣ: ಪಟ್ಟಣದ ಕಸಬಾ ಪಿಎಸಿಸಿಎಸ್ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎಚ್.ಬಿ ರಮೇಶ್ ಮತ್ತು ಉಪಾಧ್ಯಕ್ಷರಾಗಿ ಗೀತಾ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 12 ನಿರ್ದೇಶಕ ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತ 11 ನಿರ್ದೇಶಕರು ಜಯಗಳಿಸುವ ಮೂಲಕ ಈಗಾಗಲೇ ಬಹುಮತ ಹೊಂದಿದ್ದರಿಂದ ಅಧ್ಯಕ್ಷ ಸ್ಥಾನ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ರಮೇಶ್ ಮತ್ತು ಗೀತಾ ಅವರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಸಯಿದಾ ಉಜ್ಮಾ ಶಮಾನ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷ ಹೆಚ್.ಬಿ ರಮೇಶ್ ಅವರು ಮಾತನಾಡಿ ಸಹಕಾರ ಸಂಘಕ್ಕೆ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಷೇರುದಾರ ಸದಸ್ಯರಿಗೆ ನಿಗದಿತ ಸಮಯಕ್ಕೆ ಪ್ರಾಮಾಣಿಕವಾಗಿ ತಲುಪಿಸುವ ಭರವಸೆ ನೀಡಿ ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಕೋರಿ ಅಧ್ಯಕ್ಷ ಸ್ಥಾನ ಅಲಂಕರಿಸಲು ಕಾರಣರಾದ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಈ ಸಂದರ್ಭ ನಿರ್ದೇಶಕರಾದ ಎಚ್.ಬಿ ಸುರೇಶ್, ರಾಮೇಗೌಡ, ಸೈಯದ್ ಜಮೀಲ್, ಬಿ.ಆರ್ ಸತೀಶ್ ಕುಮಾರ್, ಪಿ.ಕೆ ಕುಮಾರ್, ವಿ.ಆರ್ ವೆಂಕಟೇಶ್, ಎಸ್.ಜಿ ನಳಿನಿ, ಶೋಭಾ, ಕರಿನಾಯಕ, ರಾಮಕೃಷ್ಣ, ಸಿಇಓ ಪ್ರವೀಣ್ ಮತ್ತು ಸಿಬ್ಬಂದಿ, ಜೆಡಿಎಸ್ ಮುಖಂಡರಾದ ರಾಮಚಂದ್ರು, ಪ್ರಕಾಶ್ ಸಿಂಗ್, ಬಿ.ಶಿವಣ್ಣ, ಗೋಪಾಲ್, ಪಾರೆಕೊಪ್ಪಲು ಚಂದ್ರು, ಶಿವರಾಜು, ರಘು, ಜಯಣ್ಣ ಮತ್ತಿತರಿದ್ದರು.