ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಮಳೆ ಕೈಕೊಟ್ಟ ಹಿನ್ನಲೆ ಮಳೆಗಾಗಿ ಗ್ರಾಮಸ್ಥರು ಮಕ್ಕಳಿಗೆ ಮದುವೆ ಮಾಡಿಸಿರುವ ಘಟನೆ ಬೆಟ್ಟದಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ನಾಗಮಂಗಲ ತಾಲ್ಲೂಕಿನ ಬೆಟ್ಟದಮಲ್ಲೇನಹಳ್ಳಿ ಗ್ರಾಮದಲ್ಲಿ ಮಳೆಗಾಗಿ ಕಳೆದ 15 ದಿನಗಳಿಂದ ಉಚ್ಚಮ್ಮ ದೇವಿಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಲಾಗಿದ್ದು, ಕೊನೆಯ ದಿನವಾದ ಇಂದು ಪುಟ್ಟ ಮಕ್ಕಳಿಗೆ ಮಳೆರಾಯ ದಂಪತಿ ವೇಷ ಹಾಕಿ ಮದುವೆ ಮಾಡಿಸಿ, ಪೂಜೆ ಪುನಸ್ಕಾರ ನೆರವೇರಿಸಲಾಗಿದೆ. ಸೊಬಾನ ಪದಗಳನ್ನ ಹಾಡಿ ಪೂಜೆ ಸಲ್ಲಿಸಲಾಗಿದೆ.
ಹಿಂದಿನ ಕಾಲದಿಂದಲೂ ಗ್ರಾಮಸ್ಥರು ಈ ವಿಶೇಷ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ.