ಮಂಗಳೂರು (ದಕ್ಷಿಣ ಕನ್ನಡ): ಕರಾವಳಿ, ಸಂಗೀತ ಕಲಾವಿದರ ಒಕ್ಕೂಟದ ದ.ಕ ಮತ್ತು ಉಡುಪಿ ಜಿಲ್ಲೆಯ ಸಂಸ್ಥೆಗೆ 16 ನೇ ವಾರ್ಷಿಕ ಸಂಭ್ರಮ ಪ್ರಯುಕ್ತ ಸೆಪ್ಟೆಂಬರ್ 17 ಬೆಳಿಗ್ಗೆ 9.30 ಕ್ಕೆ ಮಂಗಳೂರು ರವೀಂದ್ರ ಕಲಾ ಭವನ, ಮಂಗಳೂರು ವಿಶ್ವವಿದ್ಯಾನಿಲಯ ಹಂಪನಕಟ್ಟ ಸಭಾಂಗಣದಲ್ಲಿ ಲಿಯಾಂಡರ್ ವರ್ನನ್ ನೊರೊನ್ನಾ ಇವರ ಸ್ಮರಣಾರ್ಥ ಶ್ರೀ ಲಾಯ್ ನೊರೊನ್ನಾ ಇವ್ರ ಸಹಕಾರದೊಂದಿಗೆ ಸ್ವರಕುಡ್ಲ ಸೀಸನ್-5 ರ ಸಂಗೀತ ಸ್ಪರ್ಧೆ ಏರ್ಪಡಿಸಲಾಗಿದೆ. ಅಲ್ಲದೇ ಸೆಪ್ಟೆಂಬರ್ 23-09-2022ರಂದು ಪುರಭವನದಲ್ಲಿ ಸ್ವರಕುಡ್ಲ ಗ್ರಾಂಡ್ ಫಿನಾಲೆ ಹಾಗೂ ವಾರ್ಷಿಕೋತ್ಸವ ಸಮಾರಂಭ, ಸನ್ಮಾನ ಗೌರವ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಾಹಿತಿ ನೀಡಿದ್ದಾರೆ.