Saturday, April 19, 2025
Google search engine

Homeರಾಜಕೀಯ3 ಡಿಸಿಎಂ ಸ್ಥಾನ ಸೃಷ್ಠಿಗೆ ಸಚಿವ ಕೆ.ಎನ್ ರಾಜಣ್ಣ ಆಗ್ರಹ

3 ಡಿಸಿಎಂ ಸ್ಥಾನ ಸೃಷ್ಠಿಗೆ ಸಚಿವ ಕೆ.ಎನ್ ರಾಜಣ್ಣ ಆಗ್ರಹ

ತುಮಕೂರು:  ರಾಜ್ಯದಲ್ಲಿ ಮೂರು ಡಿಸಿಎಂ ಸ್ಥಾನ ಸೃಷ್ಠಿಸಬೇಕು ಎಂದು ಕಾಂಗ್ರೆಸ್ ಹೈಕಮಾಂ‍ಡ್ ಗೆ ಸಹಕಾರ ಸಚಿವ ಕೆ.ಎನ್ ರಾಜಣ್ಣ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಕೆ.ಎನ್ ರಾಜಣ್ಣ, ಮೂರು ಡಿಸಿಎಂ ಸ್ಥಾನ ವಿಚಾರ ನನ್ನ ಅಭಿಪ್ರಾಯ. ಈ ಕುರಿತು ಹೈಕಮಾಂಡ್ ಗೆ ಪತ್ರ ಬರೆಯುವೆ ಎಂದಿದ್ದಾರೆ.

ರಾಜ್ಯದಲ್ಲಿ  ಯಶಸ್ವಿಯಾಗಿ ಗ್ಯಾರಂಟಿ ಯೋಜನೆಗಳನ್ನ ಜಾರಿಗೊಳಿಸಿದ್ದೇವೆ.  ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಬಂದು ನಿಂತಿದ್ದೇವೆ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕಿದೆ.  ಇದಕ್ಕೆ  ಪೂರಕವಾದ ಸಮುದಾಯಗಳ ಮತ್ತಷ್ಟು ಬೆಂಬಲ ಬೇಕಿದೆ. ಹೀಗಾಗಿ ಮೂರು ಡಿಸಿಎಂ ಸ್ಥಾನ ಸೃಷ್ಠಿಸುವಂತೆ ಹೈಕಮಾಂಡ್ ಗೆ ಪತ್ರ ಬರೆಯುವೆೆ ಎಂದು ತಿಳಿಸಿದರು.

ಎಸ್ ಸಿ ಮತ್ತು ಎಸ್ ಟಿ ಸಮುದಾಯಕ್ಕೆ ಒಂದು,  ಅಲ್ಪಸಂಖ್ಯಾತ ಸಮುದಾಯಕ್ಕೆ ಒಂದು ಡಿಸಿಎಂ ಸ್ಥಾನ,  ವೀರಶೈವ ಸಮುದಾಯಕ್ಕೆ ಒಂದು ಡಿಸಿಎಂ ಸ್ಥಾನ ನೀಡಿದರೇ ಅನುಕೂಲವಾಗಲಿದೆ. ಮುಂದಿನ ತಿಂಗಳು ಹೈಕಮಾಂಡ್ ಭೇಟಿಯಾಗುವೆ. ಈ ವೇಳೆ  3 ಡಿಸಿಎಂ ಸ್ಥಾನ ಸೃಷ್ಟಿ ಪ್ರಸ್ತಾಪಿಸುವೆ ಎಂದು ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.

RELATED ARTICLES
- Advertisment -
Google search engine

Most Popular