ಮಂಗಳೂರು(ದಕ್ಷಿಣ ಕನ್ನಡ):ಗಣೇಶ ಚತುರ್ಥಿ ದಿನದಂದು ಕರಾವಳಿಯಲ್ಲಿ ವಿಶೇಷವಾಗಿ ದೇವಸ್ಥಾನ ತರವಾಡು ಮನೆಗಳಲ್ಲಿ ಚೌತಿ ಹಬ್ಬ ಇರುವುದರಿಂದ ಸೆ.19ರ ಮಂಗಳವಾರ ರಜೆ ಘೋಷಿಸಲು ಸಾರ್ವಜನಿಕರ ಬೇಡಿಕೆಯ ಹಿನ್ನೆಲೆಯಲ್ಲಿ 2023ನೇ ಸಾಲಿನ ಗಣೇಶ ಚತುರ್ಥಿ ಹಬ್ಬದ ರಜೆಯನ್ನು ಜಿಲ್ಲೆಯಾದ್ಯಂತ ಸೆ.18ರ ಸೋಮವಾರ ರದ್ದುಗೊಳಿಸಿ, ಸೆ.19ರ ಮಂಗಳವಾರ ಸಾರ್ವತ್ರಿಕ ರಜೆಯಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಘೋಷಿಸಿದ್ದಾರೆ.ಆದ್ದರಿಂದ ಸೆ.18ರ ಸೋಮವಾರ ಕರ್ತವ್ಯದ ದಿನವೆಂದು ಪರಿಗಣಿಸಲು ಸೂಚಿಸಿ ಆದೇಶಿಸಿದ್ದಾರೆ.