ಮೈಸೂರು: ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ಆಗಿರುವ ಯಾಸ್ಮಿನ್ ತಾಜ್ ಪುತ್ರನ ಪುಂಡಾಟಕ್ಕೆ ವೃದ್ದ ಗುರುಸ್ವಾಮಿ(68) ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಬಳಿ ನಡೆದಿದೆ.
ವೀಲಿಂಗ್ ಮಾಡಿ ವೃದ್ದನ ಬಲಿ ಪಡೆದ ಪಿಎಸ್ಐ ಪುತ್ರ. ಹಸುಗಳನ್ನು ಮೇಯಿಸಿ ಮನೆಗೆ ತೆರಳುತ್ತಿದ್ದ ವೇಳೆ ನಡೆದ ಘಟನೆ. ವೀಲಿಂಗ್ ಮಾಡಿಕೊಂಡು ಬಂದು ಡಿಕ್ಕಿಯೊಡೆದ ಯುವಕ ಸೈಯದ್ ಐಮಾನ್ ಉದಯಗಿರಿ ನಿವಾಸಿ. ಕಳೆದ ಕೆಲ ದಿನಗಳ ಹಿಂದೆ ವೀಲಿಂಗ್ ವಿಚಾರಕ್ಕೆ ವಶಕ್ಕೆ ಪಡೆದು ದಂಡ ಹಾಕಲಾಗಿತ್ತು. ಇದಷ್ಟೆ ಅಲ್ಲದೆ ಈತನ ವಿರುದ್ಧ ಕಳ್ಳತನ ಆರೋಪ ಕೂಡ ಇತ್ತು. ಸದ್ಯ ಆರೋಪಿ ಸೈಯದ್ ಐಮಾನ್ ಗ್ ಸಣ್ಣಪುಟ್ಟ ಗಾಯಗಳಾಗಿದ್ದು,ಅಪಘಾತಕೊಳಗಾದ ಕುಟುಂಬಸ್ಥರಿಂದಲೆ ರಕ್ಷಣೆ ಮಾಡಿ ಚಿಕಿತ್ಸೆಗೆ ಕರೆತರಲಾಗಿದ್ದು ನಮಗೆ ನ್ಯಾಯ ಕೊಡಿಸಿ ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.