Sunday, April 20, 2025
Google search engine

Homeಸ್ಥಳೀಯಮೈಸೂರು : ಗೌರಿ-ಗಣೇಶ ಹಬ್ಬಕ್ಕೆ ಖರೀದಿ ಭರಾಟೆ ಜೋರು, ಗಗನಕ್ಕೆ ಏರಿದ ಹೂವು-ಹಣ್ಣು ಬೆಲೆ

ಮೈಸೂರು : ಗೌರಿ-ಗಣೇಶ ಹಬ್ಬಕ್ಕೆ ಖರೀದಿ ಭರಾಟೆ ಜೋರು, ಗಗನಕ್ಕೆ ಏರಿದ ಹೂವು-ಹಣ್ಣು ಬೆಲೆ


ಮೈಸೂರು: ಹಬ್ಬದ ವಸ್ತುಗಳ ಖರೀದಿಗೆ ಮುಂದಾದ ನಗರದ ಜನರಿಗೆ ಹೂ-ಹಣ್ಣಿನ ದರ ಏರಿಕೆ ಬಿಸಿ ತಟ್ಟಿದೆ. ಒಂದಡೆ ಬರಗಾಲ, ಮತ್ತೊಂದಡೆ ಅಕಾಲಿಕ ಮಳೆಯಿಂದ ಹೂ-ಹಣ್ಣಿನ ದರ ಗಗನಕ್ಕೇರಿದೆ.

ಪಿಒಪಿ ಗಣೇಶ ಮೂರ್ತಿ ನಿಷೇಧ: ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಸಮಯದಲ್ಲಿ ಪೊಲೀಸರು, ಬೆಸ್ಕಾಂ, ಪಾಲಿಕೆ, ಅಗ್ನಿಶಾಮಕ, ಮಾಲಿನ್ಯ ನಿಯಂತ್ರಣ ಮಂಡಳಿ ನೀಡುವ ಸಲಹೆ, ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಿಸರ್ಜನಾ ಸ್ಥಳದಲ್ಲಿ ತ್ಯಾಜ್ಯವನ್ನು ಒಂದು ಕಡೆ ಹಾಕಿದರೆ ಸ್ವಚ್ಛತೆಗೆ ಅನುಕೂಲವಾಗಲಿದೆ. ಪಿಒಪಿ ಗಣೇಶ ಮೂರ್ತಿಗಳ ಮಾರಾಟವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ನಗರದ ಅಗ್ರಹಾರ, ಗಾಂಧಿ ವೃತ್ತ, ಇರ್ವಿನ್‌ರಸ್ತೆ, ದೇವರಾಜ ಮಾರುಕಟ್ಟೆ, ಒಲಂಪಿಯಾಥಿಯೇಟರ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಗೌರಿಗಣೇಶ ಮೂರ್ತಿಗಳ ಖರೀದಿ ಜೋರಾಗಿತ್ತು. ಪರಿಸರ ಸ್ನೇಹಿ ಗಣೇಶಮೂರ್ತಿಗೆ ಹೆಚ್ಚು ಬೇಡಿಕೆ ಇತ್ತು. ಇಂದು ಭಾನುವಾರವಾದ್ದರಿಂದ ಖರೀದಿ ಭರಾಟೆ ಮತ್ತಷ್ಟು ಜೋರಾಗಲಿದ್ದು, ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.

ಹಬ್ಬದ ಪ್ರಯುಕ್ತ ಮೂರ್ತಿಗಳ ಮಾರಾಟ ಜೋರು: ನಗರದ ದೇವರಾಜ ಮಾರುಕಟ್ಟೆ ಸೇರಿಇನ್ನಿತರ ಕಡೆಗಳಲ್ಲಿ ಜೋರಾದ ವ್ಯಾಪಾರ ವಹಿವಾಟು ನಡೆಯಿತು. ನಾನಾ ಸ್ಥಳಗಳಲ್ಲಿ ಗೌರಿ ಗಣೇಶನ ಮೂರ್ತಿಗಳ ತಯಾರಿ ಕಾರ್ಯ ಹಾಗೂ ಮಾರಾಟ ಭರದಿಂದ ಸಾಗಿದೆ. ಗೌರಿ ಮೂರ್ತಿಗಳು ೧೦೦ ರೂ. ನಿಂದ ೨೦೦೦ ರೂ.ವರೆಗೆ ಹಾಗೂ ಗಣಪತಿ ಮೂರ್ತಿಗಳು ೧೦೦ ರೂ. ನಿಂದ ೨ ಲಕ್ಷ ರೂ.ವರೆಗೆ ಮಾರಾಟವಾಗುತ್ತಿವೆ.

ಸಾರ್ವಜನಿಕರು ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಯಲ್ಲೇತೊಡಗಿದ್ದರು, ಗೌರಿ-ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುವುದಕ್ಕೆಇಡಲು ಬೇಕಾದ ಹೂವು, ಹಣ್ಣು, ತರಕಾರಿ, ಪೂಜಾ ಸಾಮಾಗ್ರಿ, ಬಾಗಿನ ನೀಡಲು ಬಿದಿರಿನ ಮೊರಖರೀದಿಸುವಲ್ಲಿ ಮಹಿಳೆಯರು ಸೇರಿದಂತೆ ಯುವಕರು ಕಾರ್ಯೋನ್ಮುಖರಾಗಿದ್ದರು. ಮಾರುಕಟ್ಟೆಗೆಜನರು ಲಗ್ಗೆ ಇಟ್ಟು, ಹಬ್ಬಕ್ಕೆ ಬೇಕಾಗುವ ಸಾಮಾಗ್ರಿಖರೀದಿಸಲು ಮುಗಿ ಬಿದ್ದರು. ದೇವರಾಜ ಮಾರುಕಟ್ಟೆ, ಮಂಡಿ ಮಾರ್ಕೆಟ್, ಅಗ್ರಹಾರದ ವಾಣಿವಿಲಾಸ ಮಾರುಕಟ್ಟೆ, ರೈಲು ನಿಲ್ದಾಣ ಸೇರಿದಂತೆ ನಗರದ ಪ್ರಮುಖ ವೃತ್ತಗಳಲ್ಲಿ ಹಬ್ಬದಖರೀದಿ ಭರಾಟೆಜೋರಾಗಿ ನಡೆಯಿತು.

ಬೆಲೆ ಏರಿಕೆ: ಕೆಲ ದಿನಗಳ ಹಿಂದ ಷ್ಟೇಕಡಿಮೆ ಇದ್ದ ಅಗತ್ಯವಸ್ತುಗಳ ಬೆಲೆಗಳು ಹಬ್ಬದ ಹಿನ್ನೆಲೆಯಲ್ಲಿಏರಿಕೆಯಾಗಿದ್ದವು. ಕಳೆದೊಂದು ತಿಂಗಳಿನಿಂದ ದರಏರಿಕೆಯಾಗಿರುವ ಏಲಕ್ಕಿ ಬಾಳೆ ದರ ಹಬ್ಬದ ಹಿನ್ನೆಲೆಯಲ್ಲಿ ಮತ್ತಷ್ಟು ಹೆಚ್ಚಾಗಿದ್ದು, ಸೇವಂತಿಗೆ ಮಾರಿಗೆ ೮೦ರಿಂದ ೧೦೦ರೂವರೆಗೆ ಮಾರಾಟವಾದರೆ ಮಲ್ಲಿಗೆ, ಮರಲೆ, ಸುಗಂಧರಾಜ, ಕಾಕಡ, ಕನಕಾಂಬರ, ಗುಲಾಬಿ ಹೂ, ಚೆಂಡು ಹೂ, ಕೆಜಿಗೆ ೧೦೦ರಿಂದ ೧೨೦ರವರೆಗೆ ಮಾರಾಟವಾಯಿತು. ಸೇಬು, ಮೂಸಂಬಿ, ದಾಳಿಂಬೆ ಕಿತ್ತಳೆ, ಫೈನಾಪಲ್, ದ್ರಾಕ್ಷಿ, ಸೀತಾಫಲ ಸೇರಿದಂತೆ ಮೊದಲಾದ ಹಣ್ಣುಗಳ ಬೆಲೆ ಕನಿಷ್ಠ ೩೦ರಿಂದ ೪೦ರೂವರೆಗೆ ಹೆಚ್ಚಾಗಿದೆ. ಮೂರುರೀತಿಯ ಬಣ್ಣದಗಣಗಲೆ ಹೂ ಸೇರಿದಂತೆಎಲ್ಲಾ ಹೂಗಳ ದರವೂ ಕೊಂಚ ಹೆಚ್ಚಾಗಿದೆ.

RELATED ARTICLES
- Advertisment -
Google search engine

Most Popular