ಮಂಗಳೂರು: ಭಗವಂತನ ಸೃಷ್ಟಿಯ ಭೂಮಿಯನ್ನು ಸುಂದರಗೊಳಿಸಿದವರು ವಿಶ್ವಕರ್ಮರು ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಹೈನುಗಾರಿಕೆ ಸಚಿವ ಪರ್ಷೋತ್ತಮ್ ರೂಪಾಲಾ ಹೇಳಿದ್ದಾರೆ.
ಕೇಂದ್ರ ಸರಕಾರದ ವಿಶ್ವಕರ್ಮ ಯೋಜನೆಗೆ ನಗರದ ಡಾ. ಟಿ.ಎಂ.ಎ. ಪೈ ಅಂತರ್ ರಾಷ್ಟ್ರೀಯ ಕನ್ವೆನ್ಷನ್ ಸಭಾಂಗಣದಲ್ಲಿ ಇಂದು ಭಾನುವಾರ ನಡೆದ ಸಮಾರಂಭದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಇದೇ ಸಂದರ್ಭ ನಡೆದ ಕೇಂದ್ರ ಸಚಿವರೊಂದಿಗಿನ ಸಂವಾದದಲ್ಲಿ ಪ್ರಕಾಶ್ ಆಚಾರ್ಯ, ನವೀನ್ ಬಂಗೇರ, ವಾಣಿಶ್ರೀ ವಿಜಯಕುಮಾರ್ ಶೆಟ್ಟಿ, ನಂದಕಿಶೋರ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಮೀನುಗಾರಿಕಾ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಂಕಾಳ್ ಎಸ್. ವೈದ್ಯ, ಶಾಸಕರಾದ ಡಾ.ವೈ.ಭರತ್ ಶೆಟ್ಟಿ ವೈ, ಡಿ.ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ , ಮಂಗಳೂರು ಮೇಯರ್ ಸುಧೀರ್ ಶೆಟ್ಟಿ, ಕೇಂದ್ರ ಸರಕಾರದ ಸಾಗರ ಮೀನುಗಾರಿಕೆ ಇಲಾಖೆಯ ಜಂಟಿ ಕಾರ್ಯದರ್ಶಿ ನೀತು ಕುಮಾರ್ ಪ್ರಸಾದ್, ರಾಜ್ಯ ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ್ ಕುಮಾರ್ ಕಲ್ಲೇರ್, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್,ಜಿಪಂ ಸಿಇಒ ಡಾ.ಆನಂದ ಉಪಸ್ಥಿತರಿದ್ದರು.