ಹೊಸೂರು : ಹಿಂದುಳಿದ ವರ್ಗಕ್ಕೆ ಸೇರಿದ ಸಮುದಾಯಗಳು ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆದು ಉತ್ತಮ ಶಿಕ್ಷಣ ಪಡೆಯಬೇಕು ಆಗ ಮಾತ್ರ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ಆಡಳಿತದ ವತಿಯಿಂದ ನಡೆದ ಶ್ರೀ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಎಲ್ಲರೂ ಶಿಕ್ಷಣದ ಮಹತ್ವವನ್ನು ಅರಿತು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದರು.
ವಿಶ್ವಕರ್ಮ ಸಮಾಜಕ್ಕೆ ಕೆ.ಆರ್.ನಗರ ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ವಿಧಾನ ಸಭೆ ಚುನಾವಣೆಗೂ ಮುನ್ನ ಸ್ವಾಮೀಜಿಗಳು ಭೂಮಿ ಪೂಜೆ ನೆರವೇರಿಸಿದ ಸ್ಥಳದಲ್ಲೇ ಭವನ ನಿರ್ಮಾಣ ಮಾಡಲು ನಿರ್ಧರಿಸಿದ್ದು ಸರ್ಕಾರದಿಂದ ಅಧಿಕೃತವಾಗಿ ಆ ನಿವೇಶನ ಮಂಜೂರು ಮಾಡಿಸಿ ಭವನ ನಿರ್ಮಾಣಕ್ಕೆ ಅನುದಾನ ಕೊಡಿಸಲಾಗುತ್ತದೆ ಎಂದು ಭರವಸೆನೀಡಿದರು.
ಕಬ್ಬಿಣದ ಕೆಲಸಗಾರ ಸಂಘದವರು ಪಟ್ಟಣದಲ್ಲಿ ನಿರ್ಮಿಸುತ್ತಿರುವ ಸಿದ್ದಪ್ಪಾಜಿ ದೇವಾಲಯದ ಕಾಮಗಾರಿಗಾಗಿ ಈ ಹಿಂದೆ ೨೫ ಲಕ್ಷ ರೂಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಲಾಗಿತ್ತು, ದೇವಾಲಯದ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆ ಮಾಡಲು ಬೇಕಾಗಿರುವ ಅನುದಾನವನ್ನು ಕೊಡಿಸಲಾಗುತ್ತದೆ ಎಂದರಲ್ಲದೆ ಸಾಲಿಗ್ರಾಮ ತಾಲೂಕು ಮುಂಜನಹಳ್ಳಿ ಗ್ರಾಮದ ದೇವಸ್ಥಾನ ನಿರ್ಮಾಣಕ್ಕೂ ೨೫ ಲಕ್ಷ ಮಂಜೂರು ಮಾಡಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ವಿಶ್ವಕರ್ಮ ಸಮುದಾಯದವರ ಜೊತೆ ನಮ್ಮ ಕುಟುಂಬ ಉತ್ತಮ ಬಾಂಧವ್ಯ ಹೊಂದಲಾಗಿದೆ. ಇದಕ್ಕಾಗಿ ಸಮಾಜದವರು ಎಲ್ಲಾ ಚುನಾವಣೆಯಲ್ಲೂ ನಮ್ಮನ್ನು ಬೆಂಬಲಿಸುತ್ತಾ ಬಂದಿದ್ದಾರೆ ಅದಕ್ಕಾಗಿ ಸಮುದಾಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ ಶಾಸಕರು ಸರ್ಕಾರದಿಂದ ನಾಮನಿರ್ದೇಶನ ಮಾಡುವ ಸಂದರ್ಭದಲ್ಲಿ ಸಮುದಾಯದ ಮುಖಂಡರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.
ವಿಶ್ವಕರ್ಮ ಜಯಂತಿ ಆಚರಣೆ ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ ಇದರ ಜತೆಗೆ ವಿಶ್ವಕರ್ಮ ಅಭಿವೃದ್ದಿ ನಿಗಮ ಸ್ಥಾಪಿಸಿ ಆ ಮೂಲಕ ಸಮುದಾಯದವರ ಅಭಿವೃದ್ದಿಗೆ ಸಹಕಾರ ನೀಡಲಾಗುತ್ತಿದೆ ಎಂದ ಶಾಸಕ ಡಿ.ರವಿಶಂಕರ್ ನಿಗಮಕ್ಕೆ ಇನ್ನಷ್ಟು ಅನುದಾನ ನೀಡುವಂತೆ ಸಮಾಜದ ಮುಖಂಡರು ಮನವಿ ಮಾಡಿದ್ದಾರೆ ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದರ ಜತೆಗೆ ಸದನ ನಡೆಯುವ ಸಂಧರ್ಭದಲ್ಲಿ ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ, ಸೆಸ್ಕಂ ಎಇಇ ಅರ್ಕೇಶ್ವರಮೂರ್ತಿ, ಸಮುದಾಯದ ಮುಖಂಡರಾದ ಕಾಳೇನಹಳ್ಳಿಕೃಷ್ಣಾರಾಜ್, ಬಸವಾಚಾರ್, ರಂಗಪ್ಪಚಾರ್, ಕ್ಷೇತ್ರಪಾಲ್, ನಂಜಪ್ಪಚಾರ್‌ರವರುಗಳನ್ನು ಸನ್ಮಾನಿಸಲಾಯಿತು. ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ವೇಣುಗೋಪಾಲ್, ಸೇವಾ ಸಮಾಜದ ಅಧ್ಯಕ್ಷ ಕೆ.ಎಸ್.ರೇವಣ್ಣ, ಪುರಸಭೆ ಮಾಜಿ ಸದಸ್ಯ ಕೆ.ಬಿ.ಸುಬ್ರಮಣ್ಯ, ಇಂಜಿನಿಯರ್ ಲಕ್ಷಿö್ಮಕಾಂತ್ ಮಾತನಾಡಿದರು.
ಸಂಘದ ಗೌರವಾಧ್ಯಕ್ಷ ಚಂದ್ರಾಚಾರ್, ಮುಖಂಡರಾದ ವೀರಭದ್ರಾಚಾರ್, ಲೋಕೇಶ್‌ಭರಣಿ, ರೇಣುಕಾಪ್ರಸನ್ನ, ಪುಟ್ಟಣ್ಣಾಚಾರ್, ಸಿ.ವಿ.ಮೋಹನ್, ನಟಶೇಖರಾಚಾರ್, ಪ್ರಕಾಶ್, ಕೆ.ಪಿ.ರಮೇಶ್, ರಾಮಾಚಾರಿ, ವೇದಾಂತಾಚಾರ್, ತುಳಸಿಕುಮಾರ್, ಕೃಷ್ಣ, ನವೀನ್, ಕಾಯಕ ಸಮಾಜದ ಮುಖಂಡರಾದ ತಿಮ್ಮಶೆಟ್ಟಿ, ವ್ಯಾನ್‌ಸುರೇಶ್, ಬಿಇಒ ಆರ್.ಕೃಷ್ಣಪ್ಪ, ಇಒ ಸತೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹರಾಜು ಮತ್ತಿತರರು ಹಾಜರಿದ್ದರು.
