Sunday, April 20, 2025
Google search engine

Homeರಾಜ್ಯಸುದ್ದಿಜಾಲಹೃದಯ ಆರೋಗ್ಯಕ್ಕೆ ಮಹಿಳೆಯರಿಂದ ವಾಕಥಾನ್

ಹೃದಯ ಆರೋಗ್ಯಕ್ಕೆ ಮಹಿಳೆಯರಿಂದ ವಾಕಥಾನ್

ಮಂಗಳೂರು: ನಗರದಲ್ಲಿ ಮಹಿಳೆಯರಿಂದ ಹೃದಯ ಆರೋಗ್ಯಕ್ಕಾಗಿ ವಾಕಥಾನ್ ನಡೆಯಿತು. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ನೇತೃತ್ವದಲ್ಲಿ ಮಹಿಳೆಯರ ಹೃದಯದ ಆರೋಗ್ಯವನ್ನು ಉತ್ತೇಜಿಸುವ ಸಲುವಾಗಿ ಆರೋಗ್ಯಕರ ಹೃದಯಕ್ಕಾಗಿ ೨ ಕಿ.ಮೀ ವುಮೆನ್ ಆನ್ ವಾಕನ್ನು ಆಯೋಜಿಸಿತ್ತು.

ಮಂಗಳೂರು ಸಂಚಾರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಗೀತಾ ಡಿ ಕುಲಕರ್ಣಿ ಅವರು ವಾಕಥಾನ್‌ಗೆ ಚಾಲನೆ ನೀಡಿದರು. ವಾಕಥಾನ್‌ಗೆ ಮಂಗಳೂರಿನ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ನ ಡೀನ್ ಆಶಿತಾ ಉಪ್ಪೂರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವೈದ್ಯಾಧಿಕಾರಿ ಪ್ರಿಯಾಂಕಾ ಶೇಖರ್ ಅತಿಥಿಗಳಾಗಿ ಭಾಗವಹಿಸಿದ್ದರು.

ಕೆಎಂಸಿ ಆಸ್ಪತ್ರೆ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಕಪ್ರಿಗುಡ್ಡದ ಮರೇನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ವರೆಗೆ ನಡೆದ ವಾಕಥಾನ್‌ಗೆ ರಾಷ್ಟ್ರಮಟ್ಟದ ಅಥ್ಲೀಟ್ ವರ್ಷಾ ಚಾಲನೆ ನೀಡಿದರು. ಈ ವಾಕಥಾನ್ ನಲ್ಲಿ ೧೦೦೦ ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular