Saturday, April 19, 2025
Google search engine

Homeರಾಜ್ಯಸುದ್ದಿಜಾಲಹಗಲಿರುಳು ದೇಶದ ಅಭಿವೃದ್ಧಿಗೆ ಶ್ರಮಿಸಿದ ನರೇಂದ್ರ ಮೋದಿ ಅವರ ಕಾರ್ಯ ಶ್ಲಾಘನೀಯ

ಹಗಲಿರುಳು ದೇಶದ ಅಭಿವೃದ್ಧಿಗೆ ಶ್ರಮಿಸಿದ ನರೇಂದ್ರ ಮೋದಿ ಅವರ ಕಾರ್ಯ ಶ್ಲಾಘನೀಯ

ಮೋದಿ ಹುಟ್ಟುಹಬ್ಬ ಅಂಗವಾಗಿ ಸಮಾಜದ ವಿವಿಧ ಶ್ರಮಿಕ ವರ್ಗದವರಿಗೆ ಗೌರವಿಸಿ ಸನ್ಮಾನ

ಪಿರಿಯಾಪಟ್ಟಣ: ಪ್ರಧಾನಿ ನರೇಂದ್ರ ಮೋದಿರವರ 73ನೇ ವರ್ಷದ ಹುಟ್ಟುಹಬ್ಬ ಅಂಗವಾಗಿ ತಾಲೂಕು ಬಿಜೆಪಿ ಘಟಕ ವತಿಯಿಂದ ಸಮಾಜದ ವಿವಿಧ ಶ್ರಮಿಕ ವರ್ಗದವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಎಂ ರಾಜೇಗೌಡ ಅವರು ಮಾತನಾಡಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯಲು ಜಾತಿ ಹಾಗೂ ಪಕ್ಷ ರಹಿತ ಆಡಳಿತ ನೀಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಇಂತಹ ವಿಶ್ವಮಾನ್ಯ ನಾಯಕರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ತಾಲೂಕು ಬಿಜೆಪಿ ಘಟಕ ವತಿಯಿಂದ ಸೆ.17 ರಿಂದ ಅ.2 ರ ಗಾಂಧೀ ಜಯಂತಿ ದಿನದವರೆಗೆ ತಾಲೂಕಿನ ವಿವಿದೆಡೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಮಾಜಿ ಶಾಸಕ ತಂಬಾಕು ಮಂಡಳಿ ಉಪಾಧ್ಯಕ್ಷ ಎಚ್.ಸಿ ಬಸವರಾಜು ಅವರು ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಬಗೆಹರಿಸಲಾಗದ ಹಲವು ಸಮಸ್ಯೆಗಳನ್ನು ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಬಗೆಹರಿಸಿದ್ದು ಇಡೀ ವಿಶ್ವವೇ ಮೆಚ್ಚುವಂತ ಪಾರದರ್ಶಕ ಆಡಳಿತ ನೀಡುತ್ತಿರುವುದರಿಂದ ನಾವು ಭಾರತೀಯರು ಎನ್ನಲು ಹೆಮ್ಮೆಯಿದೆ, ಕುಟುಂಬ ಹಾಗೂ ಪಕ್ಷ ರಾಜಕಾರಣಕ್ಕೆ ಒತ್ತು ನೀಡದೆ ಹಗಲಿರುಳು ದೇಶದ ಅಭಿವೃದ್ಧಿಗೆ ಶ್ರಮಿಸಿದ ನರೇಂದ್ರ ಮೋದಿ ಅವರ ಕಾರ್ಯ ಶ್ಲಾಘನೀಯ ಎಂದರು.

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ರಾಜೇಂದ್ರ ಅವರು ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳನ್ನು ನಾವು ಬರಿ ಬಾಯಿ ಮಾತಲ್ಲಿ ಹೇಳದೆ ಆಚರಣೆಗೆ ತಂದಾಗ ಮಾತ್ರ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯವಾಗುತ್ತದೆ ಎಂದರು.

ಮುಖಂಡರಾದ ಕೌಲನಹಳ್ಳಿ ಸೋಮಶೇಖರ್, ಆರ್.ಟಿ ಸತೀಶ್ ಮಾತನಾಡಿದರು, ಈ ವೇಳೆ ಸಮಾಜ ಸೇವಕರು ಪೌರಕಾರ್ಮಿಕರು ಕುಲ ಕಸುಬನ್ನು ವೃತ್ತಿಯಾಗಿ ಅವಲಂಬಿಸಿರುವವರು ಹಾಗೂ ವಿಶೇಷ ಚೇತನರು ಸೇರಿದಂತೆ ಸಮಾಜದ ವಿವಿಧ ಶ್ರಮಿಕ ವರ್ಗದವರನ್ನು ಅಭಿನಂದಿಸಲಾಯಿತು.

ಈ ಸಂದರ್ಭ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ವೀರಭದ್ರ, ಚಂದ್ರು, ವಿವಿಧ ಮೋರ್ಚಾ ಪದಾಧಿಕಾರಿಗಳಾದ ಲೋಕೆಶ್, ಲೋಕಪಾಲಯ್ಯ, ಕೃಷ್ಣ, ಟಿ.ರಮೇಶ್, ವಿಜಯಕುಮಾರ್, ಸ್ವಾಮಿ, ನಳಿನಿ, ಶುಭಗೌಡ, ಗೀತಾ, ಕಿರಂಗೂರು ಮೋಹನ್, ನಾಗೇಶ್, ಮಂಜು, ಭಾನು ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.

RELATED ARTICLES
- Advertisment -
Google search engine

Most Popular