ಮಂಡ್ಯ: ಭತ್ತದ ನಾಟಿ ಮುಗಿಸಿ ವಾಪಸ್ಸಾಗುವ ವೇಳೆ ಟಿಲ್ಲರ್‌ಗೆ ಕಾರು ಡಿಕ್ಕಿ ಹೊಡೆದು ಯುವಕನ ಎದೆಗೆ ಹ್ಯಾಂಡಲ್ ಚುಚ್ಚಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕ ಮಂಡ್ಯ ಬಳಿ ಸರ್ವಿಸ್ ರಸ್ತೆಯಲ್ಲಿ ನಡೆದಿದೆ.
ಚಿಕ್ಕಮಂಡ್ಯದ ಸುದರ್ಶನ್ (೧೯)ಮೃತ ಯುವಕ, ಡಿಕ್ಕಿ ಹೊಡೆದು ಕಾರು ಚಾಲಕ ವಾಹನದ ಸಮೇತ ಪರಾರಿಯಾಗಿದ್ದನೆ
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮಂಡ್ಯ ಮಿಮ್ಸ್ ಶವಗಾರಕ್ಕೆ ಮೃತ ದೇಹ ರವಾನೆ ಮಾಡದ್ದಾರೆ. ಸ್ಥಳದಲ್ಲಿ ಮುಗಿಲು ಮುಟ್ಟಿದ ಯುವಕನ ಕುಟುಂಬಸ್ಥರ ಆಕ್ರಂದನ, ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.