ಮಂಡ್ಯ: ನಾಡಿನ ಜನತೆಗೆ ನನ್ನ ಹಾಗೂ ಸರ್ಕಾರದ ಪರವಾಗಿ ಗೌರಿ-ಗಣೇಶ ಹಬ್ಬದ ಶುಭಾಶಯಗಳು ಈ ಬಾರಿ ಮಳೆ ಅಭಾವದಿಂದ ಬಹಳಷ್ಟು ಸಂಕಷ್ಟಗಳು ಎದುರಾಗಿವೆ. ಆದ್ದರಿಂದ ಗಣಪತಿ ಆ ಎಲ್ಲಾ ಸಂಕಷ್ಟಗಳನ್ನು ನಿವಾರಣೆ ಮಾಡ್ತಾನೆ ಅನ್ನೋ ವಿಶ್ವಾಸ ಇದೆ, ಸಂಕಷ್ಟ ದೂರ ಮಾಡಲಿ ಅಂತ ಪ್ರಾರ್ಥಿಸುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಮೂರು ಡಿಸಿಎಂಗೆ ಬೇಡಿಕೆ ಹೆಚ್ಚಾದ ವಿಚಾರ ಇದೆಲ್ಲ ನಮ್ಮ ವರಿಷ್ಠರು ತೀರ್ಮಾನ ಮಾಡುವಂತದ್ದು. ನಮ್ಮ ಅನೇಕ ಜನ ಅವರ ವೈಯಕ್ತಿಕ ಅಭಿಪ್ರಾಯಗಳನ್ನ ಆಗಾಗ ಹೇಳ್ತಿರುತ್ತಾರೆ. ಈ ವಿಚಾರವನ್ನ ಹೈಕಮಾಂಡ್‌ಗೆ ಬಿಟ್ಟು ಬಿಡೋಣ. ಅದನ್ನ ಅವರೇ ಕೇಳಬೇಕು. ನಾನು ಹೈಕಮಾಂಡ್ ಗಮನಕ್ಕೆ ತರಕ್ಕಾಗಲ್ಲ, ಅವರ ಅಭಿಪ್ರಾಯ ಹೇಳಿದ್ದಾರೆ ತಪ್ಪು ಕೂಡ ಇಲ್ಲ ಎಂದು ತಿಳಿಸಿದರು.
ಇಂದು ಕಾವೇರಿ ನಿರ್ವಾಹಣಾ ಪ್ರಾಧಿಕಾರದ ಸಭೆ ವಿಚಾರ ಏನು ತೀರ್ಪು ಬರುತ್ತೆ ಕಾದು ನೋಡೋಣ.
ನಮ್ಮ ಪರವಾಗಿ ಬರಬೇಕು ಅಂತ ನಾವೆಲ್ಲ ಆಸೆ ಇಟ್ಟಿದ್ದೇವೆ ಅದಕ್ಕೆ ತಕ್ಕಂತೆ ಎಲ್ಲಾ ವಿಷಯಗಳನ್ನ ತಿಳಿಸಿದ್ದೇವೆ.
ಕಾದು ನೋಡೋಣ. ಇಂದಿನಿಂದ ಸಂಸತ್ ವಿಶೇಷ ಅಧಿವೇಶನದ ವಿಚಾರ ವಿಶೇಷ ಅಧಿವೇಶನದಲ್ಲಿ ಒನ್ ನೇಷನ್, ಒನ್ ಎಲೆಕ್ಷನ್ ಮಸೂದೆ ಮಂಡನೆ ವಿಚಾರ. ಏನು ಅಜೆಂಡಾ ತರ್ತಾರೆ ಅಂತ ಬಂದ ನಂತರ ನಮ್ಮ ಪಕ್ಷ ನಿಲುವನ್ನ ವರಿಷ್ಠರು, ಲೋಕಸಭಾ ಸದಸ್ಯರು ತಿಳಿಸುತ್ತಾರೆ.
ಕಾವೇರಿ ವಿಚಾರವಾಗಿ ಸರ್ವ ಪಕ್ಷ ಸಭೆಯಲ್ಲಿ ಚರ್ಚೆ ನಡೆಸಿ ಸರ್ವ ಪಕ್ಷದ ಸಭೆಯನ್ನ ಮುಖ್ಯಮಂತ್ರಿಗಳು ಕರೆದು ಎಲ್ಲ ಮಾಹಿತಿಯನ್ನು ಅವರಿಗೆ ಒದಗಿಸಿದ್ದಾರೆ. ನಿಮಗೆ ಸಹಕಾರ ಕೊಡ್ತೇವೆ ಅಂತ ಬಿಜೆಪಿ, ಜೆಡಿಎಸ್ ನವರು ತಿಳಿಸಿದ್ದಾರೆ. ಒಳಗಡೆ ಸಂಪೂರ್ಣ ಸಹಕಾರ ಕೊಡ್ತೇವೆ ಅಂತ ಹೇಳಿ ಈಗ ಹೋರಾಟ ಮಾಡ್ತೀವಿ ಅಂದ್ರೆ ಅದಕ್ಕೆ ಅರ್ಥ ಇದ್ಯಾ? ವಿರೋಧ ಪಕ್ಷದವರು ಸಂಪೂರ್ಣ ಸಹಕಾರ ಕೊಡಬೇಕು ಎಂದರು.