Monday, April 21, 2025
Google search engine

Homeಅಪರಾಧಬಿಜೆಪಿ ಸಂಸದ ಸತೀಶ್‌ಚಂದ್ರ ದುಬೆ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಬಿಜೆಪಿ ಸಂಸದ ಸತೀಶ್‌ಚಂದ್ರ ದುಬೆ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಪಾಟ್ನಾ: ಬಿಜೆಪಿ ಸಂಸದ ಸತೀಶ್ ಚಂದ್ರ ದುಬೆ ಅವರಿದ್ದ ಕಾರು ಪಾಟ್ನಾದಲ್ಲಿ ಅಪಘಾತಕ್ಕೀಡಾಗಿದ್ದು, ಸಂಸದರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಹಾರದ ಪಾಟ್ನಾದ ಗಾಂಧಿ ಸೇತು ಸೇತುವೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಅವರ ಭದ್ರತಾ ಸಿಬ್ಬಂದಿ ಮತ್ತು ಕಾರು ಚಾಲಕ ಕೂಡ ಗಂಭೀರ ಗಾಯಗೊಂಡಿದ್ದಾರೆ.

ಅಪಘಾತದ ಬಳಿಕ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ೪೮ ವರ್ಷದ ಬಿಜೆಪಿ ಸಂಸದ, ಸತೀಶ್ ಚಂದ್ರ ದುಬೆ ಅವರು ೨೦೨೨ ರಲ್ಲಿ ಸಂಸತ್ತಿನ ಮೇಲ್ಮನೆಗೆ ಚುನಾಯಿತರಾಗಿದ್ದರು. ಇದಕ್ಕೂ ಮೊದಲು ಅವರು ಬಿಹಾರದ ವಾಲ್ಮೀಕಿ ನಗರ ಕ್ಷೇತ್ರವನ್ನು ಪ್ರತಿನಿಧಿಸುವ ಲೋಕಸಭಾ ಸಂಸದರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಅವರು ೨೦೦೫ ರಲ್ಲಿ ನಾಟ್ಕಟಿಯಾಗಂಜ್‌ನಿಂದ ಬಿಹಾರ ವಿಧಾನಸಭೆಯ ಸದಸ್ಯರಾಗಿದ್ದರು. ಹಾಜಿಪುರದಿಂದ ಪಾಟ್ನಾಗೆ ಬರುತ್ತಿದ್ದಾಗ, ಸಂಸದರ ಚಾಲಕ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದಾನೆ, ಐಷಾರಾಮಿ ಕಾರಿನ ವೇಗ ಹೆಚ್ಚಾಗಿದ್ದು ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಈ ವೇಳೆ ಸಂಸದ ಸತೀಶ್ ಚಂದ್ರ ದುಬೆ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.

ಜೊತೆಗಿದ್ದ ಬೆಂಗಾವಲು ತಂಡವು ಕಾರಿನಿಂದ ಎಲ್ಲರನ್ನು ಹೊರತೆಗೆದರು, ಇದರಲ್ಲಿ ಚಾಲಕ ಮತ್ತು ಇಬ್ಬರು ಬಾಡಿ ಗಾರ್ಡ್‌ಗಳ ತಲೆ ಮತ್ತು ಇತರ ಹಲವು ಭಾಗಗಳಲ್ಲಿ ಗಂಭೀರವಾದ ಗಾಯಗಳಾಗಿವೆ. ಮೂವರನ್ನು ಪಿಎಂಸಿಎಚ್ ಗೆ ದಾಖಲಿಸಲಾಗಿದ್ದು, ಸಂಸದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಹಿತಿ ಪ್ರಕಾರ ಸಂಸದರ ಸ್ಥಿತಿ ಸುಧಾರಿಸುತ್ತಿದೆ.

RELATED ARTICLES
- Advertisment -
Google search engine

Most Popular